ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್  ಪ್ರಚಾರ ಜಾಹಿರಾತಿನಲ್ಲಿ ರಾರಾಜಿಸಿದ ಮೋದಿ! 

ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. 
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್  ಪ್ರಚಾರ ಜಾಹಿರಾತಿನಲ್ಲಿ ರಾರಾಜಿಸಿದ ಮೋದಿ!
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್  ಪ್ರಚಾರ ಜಾಹಿರಾತಿನಲ್ಲಿ ರಾರಾಜಿಸಿದ ಮೋದಿ!

ವಾಷಿಂಗ್ ಟನ್: ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. 

ಈಗಾಗಲೇ ಡೆಮಾಕ್ರೆಟಿಕ್ ಪಕ್ಷದಿಂದ ಜೋಯ್ ಬಿಡೇನ್ ಅಧ್ಯಕ್ಷೀಯ ಚುನಾವಣೆಯ ಅಖಾಡಕ್ಕೆ ಧುಮುಕಿದ್ದರೆ, ರಿಪಬ್ಲಿಕನ್ ಪಕ್ಷದಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆಯನ್ನು ಬಯಸಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. 

ಎರಡೂ ಪಕ್ಷಗಳು ಅಮೆರಿಕಾದಲ್ಲಿರುವ ಭಾರತೀಯರ ಮತಗಳನ್ನು ಸೆಳೆಯುವುದಕ್ಕೆ ಹರಸಾಹಸ ಮಾಡುತ್ತಿವೆ. ಡೆಮಾಕ್ರೆಟಿಕ್ ಪಕ್ಷ ಭಾರತೀಯ ಮತಗಳನ್ನು ಸೆಳೆಯುವುದಕ್ಕಾಗಿ ಭಾರತೀಯ ಮೂಲವನ್ನು ಹೊಂದಿರುವ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೆ, ಡೊನಾಲ್ಡ್ ಟ್ರಂಪ್, ಭಾರತೀಯರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹವನ್ನೇ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಲು ಮುಂದಾಗಿದ್ದಾರೆ. 

ಈ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಡೊನಾಲ್ಡ್ ಟ್ರಂಪ್ ಪರವಾಗಿ ಕೆಲಸ ಮಾಡುತ್ತಿರುವ ಪ್ರಚಾರ ತಂಡ, ಭಾರತೀಯರ ಮತಗಳನ್ನು ತಮ್ಮತ್ತ ಸೆಳೆಯುವುದಕ್ಕೆ ಮೋದಿ ಟ್ರಂಪ್ ಜೊತೆ ಇರುವ, ಡೊನಾಲ್ಡ್ ಟ್ರಂಪ್ ಅಹ್ಮದಾಬಾದ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಡಿದ್ದ ಭಾಷಣದ ತುಣುಕುಗಳನ್ನೊಳಗೊಂಡ ಜಾಹಿರಾತನ್ನು ಪ್ರಕಟಿಸಿದೆ. 

ಅಮೆರಿಕ ಭಾರತದ ಜೊತೆಗೆ ಅತ್ಯುತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ, ನಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಅಮೆರಿಕಾದಲ್ಲಿರುವ ಭಾರತೀಯರಿಂದ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಟ್ರಂಪ್ ವಿಕ್ಟರಿ ಫೈನಾನ್ಸ್ ಸಮಿತಿಯ ನ್ಯಾಷನಲ್ ಚೇರ್ ಕಿಂಬರ್ಲಿ ಗಿಲ್ಫಾಯ್ಲ್ ಹೇಳಿದ್ದಾರೆ. 

ಮೋದಿಯನ್ನೊಳಗೊಂಡ ಟ್ರಂಪ್ ಪರವಾದ ಮೊದಲ ಜಾಹಿರಾತು ವಿಡಿಯೋಗೆ ಮೊದಲ ಕೆಲವು ಗಂಟೆಗಳಲ್ಲಿ ಟ್ವಿಟರ್ ನಲ್ಲಿ 66,000 ವೀಕ್ಷಣೆ ದೊರೆತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com