36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದನೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್? ನಿಧನದ ಸುದ್ದಿ ಶೀಘ್ರ ಘೋಷಣೆ?

ಉತ್ತರ ಕೊರಿ­ಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಿಮ್ ಜಾಂಗ್ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ

Published: 25th August 2020 07:51 AM  |   Last Updated: 25th August 2020 07:51 AM   |  A+A-


Kim jong un

ಕಿಮ್ ಜಾಂಗ್ ಉನ್

Posted By : Shilpa D
Source : Online Desk

ಸೋಲ್‌: ಉತ್ತರ ಕೊರಿ­ಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಿಮ್ ಜಾಂಗ್ ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು ಮೃತಪಟ್ಟಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ವಾಧಿಕಾರಿ ವ್ಯವಸ್ಥೆ ಇರುವಂತಹ ಉತ್ತರ ಕೊರಿಯಾ ಆಡಳಿತ ಈ ವಿಚಾರದಲ್ಲಿಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒಂದೊಮ್ಮೆ ಉನ್‌ ಸತ್ತಿರುವುದು ನಿಜವಾಗಿದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. 36 ವರ್ಷದ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರ­ತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ
ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ‍್ಯದರ್ಶಿ­ಯಾಗಿದ್ದ ಚಾಂಗ್‌ ಸಾಂಗ್‌ ಮಿನ್‌ ಹೇಳಿಕೆ ನೀಡಿದ್ದರು. 

ಇದಾದ ಬಳಿಕ ಪತ್ರಕರ್ತ­ರೊಬ್ಬರು ಕಿಮ್‌ ಸತ್ತಿದ್ದು, ಉದ್ದೇಶಪೂರ್ವಕವಾಗಿಯೇ ಅದು ಅಂತಾರಾಷ್ಟ್ರೀಯ ಸಮುದಾಯದಿಂದ ಮುಚ್ಚಿಡುತ್ತಿದೆ ಎಂದು ಹೇಳಿದ ಬೆನ್ನಲ್ಲೇ ಸಾವಿನ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಉತ್ತರ ಕೊರಿಯಾದಿಂದ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ದೊರೆತಿಲ್ಲ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp