ಪಿಎನ್‌ಬಿ ಹಗರಣ: ನೀರವ್ ಮೋದಿ ಪತ್ನಿ ವಿರುದ್ಧ ಇಂಟರ್ಪೋಲ್ ವಾರಂಟ್ ಜಾರಿ

 2 ಬಿಲಿಯನ್ ಯುಎಸ್ ಡಾಲರ್ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದ ಮುಖ್ಯ ಆರೋಪಿ ನೀರವ್ ಮೋದಿಯ ಪತ್ನಿ ಅಮಿ ಮೋದಿ ವಿರುದ್ಧ ಇಂಟರ್‌ಪೋಲ್ ಜಾಗತಿಕ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಜಾಗತಿಕ ಪೊಲೀಸ್ ಸಂಸ್ಥೆ 'ರೆಡ್ ನೋಟಿಸ್' ನೀಡಿದೆ ಎಂದು ಅವರು ಹೇಳಿದರು.

Published: 25th August 2020 03:13 PM  |   Last Updated: 25th August 2020 03:13 PM   |  A+A-


ನೀರವ್ ಮೋದಿ ಅಮಿ ಮೋದಿ

Posted By : Raghavendra Adiga
Source : PTI

2 ಬಿಲಿಯನ್ ಯುಎಸ್ ಡಾಲರ್ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದ ಮುಖ್ಯ ಆರೋಪಿ ನೀರವ್ ಮೋದಿಯ ಪತ್ನಿ ಅಮಿ ಮೋದಿ ವಿರುದ್ಧ ಇಂಟರ್‌ಪೋಲ್ ಜಾಗತಿಕ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಜಾಗತಿಕ ಪೊಲೀಸ್ ಸಂಸ್ಥೆ 'ರೆಡ್ ನೋಟಿಸ್' ನೀಡಿದೆ ಎಂದು ಅವರು ಹೇಳಿದರು.

ನೀರವ್ ಮೋದಿಯ ಪತ್ನಿ ಅಮಿ ಮೋದಿ  ವಿರುದ್ಧ ಅಂತಹ ನೋಟಿಸ್ ನೀಡಿದ ನಂತರ, ಇಂಟರ್ಪೋಲ್ ತನ್ನ 192 ಸದಸ್ಯ ರಾಷ್ಟ್ರಗಳಲ್ಲಿ ಯಾವುದೇ ದೇಶದಲ್ಲಿ ಅವರು ಕಂಡುಬಂದರೆ ಆ ವ್ಯಕ್ತಿಯನ್ನು ಬಂಧಿಸಲು ಮನವಿ ಮಾಡುತ್ತದೆ.  ಆ ನಂತರ ಅವರ  ಹಸ್ತಾಂತರ ಅಥವಾ ಗಡೀಪಾರು ಪ್ರಕ್ರಿಯೆಗಳು ಪ್ರಾರಂಭವಾಗಬಹುದು. 2018 ರಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಮಿ ಮೋದಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದೆ.

ಪತಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿಯವರೊಂದಿಗೆ ಪಿತೂರಿ ನಡೆಸಿ ಹಣ ವರ್ಗಾವಣೆ ಮಾಡಿದ್ದಕ್ಕಾಗಿ ಇಡಿ ಅಮಿ ಮೋದಿ ವಿರುದ್ಧಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯ ಅಡಿಯಲ್ಲಿಆರೋಪ ಹೊರಿಸಿದೆ.

ನೀರವ್ ಮೋದಿ (49) ಅವರನ್ನು 2019 ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಬಂಧಿಸಿದ ನಂತರ ಯುಕೆ ಜೈಲಿನಲ್ಲಿ ಇರಿಸಲಾಗಿದ್ದು, ಪ್ರಸ್ತುತ ಭಾರತಕ್ಕೆ ಹಸ್ತಾಂತರದ ವಿರುದ್ಧ ಅವರು ಹೋಆಟ ನಡೆಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರನ್ನು ಮುಂಬೈ ನ್ಯಾಯಾಲಯವು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ ಮತ್ತು ನ್ಯಾಯಾಲಯವು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿದೆ. . ಇಡಿ ಈಗಾಗಲೇ ಅವರ ಸಂಬಂಧಿತ ಆಸ್ತಿಗಳಲ್ಲಿ ಸುಮಾರು 329 ಕೋಟಿ ರೂ. ನಷ್ಟನ್ನು ಲಗತ್ತಿಸಿದೆ.

ಮುಂಬೈನ ಪಿಎನ್‌ಬಿ ಶಾಖೆಯೊಂದರಲ್ಲಿ 2 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಚೋಕ್ಸಿ ಮತ್ತು ಇತರರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ನೀರವ್ ಮೋದಿ ಅವರ ಕಿರಿಯ ಸಹೋದರ ನೇಹಾಲ್ ಮೋದಿ ಮತ್ತು ಸಹೋದರಿ ಪೂರ್ವಿ ಮೋದಿ ವಿರುದ್ಧ ಇದೇ ರೀತಿಯ ಇಂಟರ್ಪೋಲ್ ನೋಟಿಸ್ ನೀಡಲಾಗಿದೆ

Stay up to date on all the latest ಅಂತಾರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp