ಚೀನೀಯರಿಗೂ ಕ್ಸಿ ಜಿನ್​ಪಿಂಗ್​ಗಿಂತ ಮೋದಿ ಮೇಲೆ ಹೆಚ್ಚು ಒಲವು: ಚೀನಾ ಸರ್ಕಾರದ ಪತ್ರಿಕೆ ಸಮೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಿನಂಪ್ರತಿ ಟೀಕಿಸುತ್ತಿದ್ದಾರೆ. ಆದರೆ ಚೀನಾ ಮಂದಿಯೂ ಅಲ್ಲಿನ ಪ್ರಧಾನಿ ಕ್ಸಿ ಜಿನ್​ಪಿಂಗ್​ಗಿಂತ ಮೋದಿ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. 
ಕ್ಸಿ ಜಿನ್ ಪಿಂಗ್-ಮೋದಿ
ಕ್ಸಿ ಜಿನ್ ಪಿಂಗ್-ಮೋದಿ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಿನಂಪ್ರತಿ ಟೀಕಿಸುತ್ತಿದ್ದಾರೆ. ಆದರೆ ಚೀನಾ ಮಂದಿಯೂ ಅಲ್ಲಿನ ಪ್ರಧಾನಿ ಕ್ಸಿ ಜಿನ್​ಪಿಂಗ್​ಗಿಂತ ಮೋದಿ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. 

ಹೌದು ಲಡಾಖ್ ಹಿಂಸಾಚಾರದ ಮೂರು ತಿಂಗಳ ಬಳಿಕ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಸಮೀಕ್ಷೆಯೊಂದನ್ನು ನಡೆಸಿದ್ದು ಹೆಚ್ಚಿನ ಚೀನೀಯರು ತಮ್ಮ ನಾಯಕರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. 

ಗ್ಲೋಬಲ್ ಟೈಮ್ಸ್ ಸಮೀಕ್ಷೆ ಪ್ರಕಾರ, ಚೀನಾ ಸರ್ಕಾರದ ಪರ ಶೇಕಡಾ 50ರಷ್ಟು ಮಂದಿ ಓಕೆ ಓಕೆ ಎಂದು ಹೇಳಿದ್ದು ಇನ್ನು 50ರಷ್ಟು ಮಂದಿ ಮೋದಿ ಸರ್ಕಾರ ಇದ್ದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದಾರೆ. ಇನ್ನು ಭಾರತದಲ್ಲಿ ಚೀನಾ ವಿರೋಧಿ ಭಾವನೆ ತುಂಬಾ ಹೆಚ್ಚಾಗಿದೆ ಎಂದು ಶೇಕಡಾ 70ರಷ್ಟು ಮಂದಿ ನಂಬಿದ್ದಾರೆ. 

ಇನ್ನು ಪ್ರಸ್ತುತ ಉಭಯ ದೇಶಗಳ ನಡುವಿನ ಸಂಬಂಧವು ಸುಧಾರಿಸುತ್ತದೆ ಎಂದು ಶೇಕಡಾ 30ಕ್ಕಿಂತ ಹೆಚ್ಚು ಜನರು ನಂಬಿದ್ದರೆ 9ರಷ್ಟು ಮಂದಿ ಈ ಸಂಬಂಧ ಅಲ್ಪಾವಧಿಗೆ ಸುಧಾರಣೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಶೇಕಡಾ 25ರಷ್ಟು ಜನರ ಪ್ರಕಾರ ಉಭಯ ದೇಶಗಳ ನಡುವಿನ ಸಂಬಂಧವು ದೀರ್ಘಕಾಲದವರೆಗೆ ಸದೃಢವಾಗಿರುತ್ತದೆ ಎಂದು ಭಾವಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com