ದೀರ್ಘಕಾಲದ ಅನಾರೋಗ್ಯ: 'ರಾಜೀನಾಮೆಗೆ ಮುಂದಾದ' ಜಪಾನ್ ಪ್ರಧಾನಿ  ಶಿಂಜೊ ಅಬೆ

ಜಪಾನ್ ಪ್ರಧಾನಿ ಶಿಂಜೊ ಅಬೆ ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.

Published: 28th August 2020 12:17 PM  |   Last Updated: 28th August 2020 12:17 PM   |  A+A-


ಶಿಂಜೊ ಅಬೆ

Posted By : Raghavendra Adiga
Source : Online Desk

ಟೋಕಿಯೋ: ಜಪಾನ್ ಪ್ರಧಾನಿ ಶಿಂಜೊ ಅಬೆ ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಜಪಾನ್ ರಾಷ್ಟ್ರೀಯ ಸುದ್ದಿವಾಹಿನಿ ಎನ್‌ಎಚ್‌ಕೆ ಆರೋಗ್ಯ ಸಮಸ್ಯೆಗಳಿಂದಾಗಿ ಅಬೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ವರದಿ ಮಾಡಿದೆ,

ಜಪಾನ್‌ನ ಸುದೀರ್ಘ ಅವಧಿಯ ಪ್ರಧಾನ ಮಂತ್ರಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ  ಅಬೆ, ಒಂದು ದಶಕಕ್ಕೂ ಹೆಚ್ಚು ಕಾಲ ದಿಂದ ಅಲ್ಸರೇಟಿವ್ ಕೊಲೈಟಿಸ್‌ನಿಂದ ಬಳಲುತ್ತಿದ್ದಾರೆ. ಕರುಳಿನ ಉರಿಯೂತದ  ಕಾಯಿಲೆಗೆ ಚಿಕಿತ್ಸೆ ಪಡೆಯಲು 65 ವರ್ಷದ ಅವರು 2007 ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಅಧಿಕಾರ ತೊರೆದಿದ್ದರು.

ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿದೆ ಸುಗಾ ಅವರು ಆಗಸ್ಟ್ 4 ರಂದು ಮಾತನಾಡಿ ಅಬೆ ರಾಜೀನಾಮೆ ನೀಡುತ್ತಾರೆ ಎಂದು ನಂಬಿರಲಿಲ್ಲ ಆದರೆ ಕಳೆದ ಹದಿನೈದು ದಿನಗಳಲ್ಲಿ ಎರಡು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದ ಅಬೆ ತಮ್ಮ ಅಧಿಕಾರದ ಪೂರ್ಣಾವಧಿ ನೋಡಲು ಸಾಧ್ಯವಾಗುವುದಿಲ್ಲ  ಎಂಬ ಆತಂಕವನ್ನು ಹೆಚ್ಚಿಸಿದೆ ಎಂದಿದ್ದರು. ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.

ಕೊರೋನಾವೈರಸ್ ಸ್ ಸಾಂಕ್ರಾಮಿಕ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ದೊಡ್ಡ ಪ್ರಮಾಣದ ಆರ್ಥಿಕ ಹಿಂಜರಿತದ ನಡುವೆ ಅಬೆ ಜೂನ್‌ನಿಂದ ಪತ್ರಿಕಾಗೋಷ್ಠಿ ನಡೆಸಿಲ್ಲ. 

ಅಬೆ ಅವರ ಎರಡನೆಯ ಅವಧಿಯ ಎಂಟು ವರ್ಷಗಳಲ್ಲಿ ಉದಾರವಾದಿ ಹಣಕಾಸಿನ ನೀತಿ, ಬಡ್ಡಿದರಗಳನ್ನು ಕಡಿತಗೊಳಿಸುವುದು ಮತ್ತು ಸರ್ಕಾರಿ ಸ್ವಾಮ್ಯದ ಕ್ಷೇತ್ರಗಳನ್ನು ಉದಾರೀಕರಣಗೊಳಿಸುವುಕೆಗೆ ಒತ್ತು, ಜಪಾನ್‌ನ ಪ್ರಾಚೀನ  ಆರ್ಥಿಕತೆಯನ್ನು ಉತ್ತೇಜಿಸುವ"ತ್ರಿ ಆರೋಸ್(ಮೂರು ಬಾಣಗಳು)" ವಿಧಾನವನ್ನು "ಅಬೆನೋಮಿಕ್ಸ್" ಎಂದು ಕರೆಯಲಾಗಿತ್ತು.

 ಜಾಗತಿಕ ವ್ಯವಹಾರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚು ಪ್ರತಿಪಾದಿಸಲು ಮತ್ತು ಯುದ್ಧಾನಂತರದ ತನ್ನ ಶಾಂತಿಯ ಮೇಲಿನ ಬದ್ದತೆಯನ್ನು ಬಿಚ್ಚಿಡಲು ಅಬೆ ಎರಡನೇ ಮಹಾಯುದ್ಧದಿಂದ ಕೆರಳಿದ ಜಪಾನ್‌ಗೆ ಒತ್ತಾಸೆಯಾಗಿದ್ದಾರೆ.ಚೀನಾ ಬೆಳವಣಿಗೆಯ ವಿರುದ್ಧ  ತನ್ನ ರಕ್ಷಣೆಯನ್ನು ಹೆಚ್ಚಿಸಲು ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ "ಫೈವ್ ಐಸ್" ಭದ್ರತಾ ಜಾಲದಲ್ಲಿ ಸೇರ್ಪಡೆಗೊಳ್ಳಲು ಜಪಾನ್ ಲಾಬಿ ಮಾಡುತ್ತಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp