ಈ ವರ್ಷಾಂತ್ಯಕ್ಕೆ ಕೋವಿಡ್ ಲಸಿಕೆ ತಯಾರಿಕೆ- ಡೊನಾಲ್ಡ್ ಟ್ರಂಪ್ 

 ಕೊವೀಡ್ -19 ಕಣ್ಣಿಗೆ ಕಾಣದ ಹೊಸ ಪ್ರಬಲ ಶತ್ರು ಎಂದು ಬಣ್ಣಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷದ ಅಂತ್ಯಕ್ಕೆ ಲಸಿಕೆ ತಯಾರು ಆಗಲಿದೆ ಎಂದು ಹೇಳಿದ್ದಾರೆ.

Published: 28th August 2020 02:40 PM  |   Last Updated: 28th August 2020 02:40 PM   |  A+A-


Donald_Trump1

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Posted By : nagaraja
Source : PTI

ವಾಷಿಂಗ್ಟನ್:  ಕೊವೀಡ್ -19 ಕಣ್ಣಿಗೆ ಕಾಣದ ಹೊಸ ಪ್ರಬಲ ಶತ್ರು ಎಂದು ಬಣ್ಣಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಈ ವರ್ಷದ ಅಂತ್ಯಕ್ಕೆ ಲಸಿಕೆ ತಯಾರು ಆಗಲಿದೆ ಎಂದು ಹೇಳಿದ್ದಾರೆ.

 ಶ್ವೇತಭವನದಲ್ಲಿ ನಡೆದ ರಿಪಬ್ಲಿಕನ್ ನೇಷನ್ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾ ಸೇರಿದಂತೆ ಇಡೀ ವಿಶ್ವ ಕಣ್ಣಿಗೆ ಕಾಣದ ಹೊಸ ಶತ್ರುವಿನಿಂದ ನಲುಗಿದ್ದು, ಧೈರ್ಯಶಾಲಿ ಅಮೆರಿಕಾ ಜನತೆ ಈ ಸವಾಲನ್ನು ದಿಟ್ಟತೆಯಿಂದ ಎದುರಿಸುತ್ತೇವೆ ಎಂದರು.

ಈ ವರ್ಷಾಂತ್ಯ ಅಥವಾ ಅದಕ್ಕೂ ಮುಂಚಿತವಾಗಿ ಲಸಿಕೆಯನ್ನು ತಯಾರಿಸಲಿದ್ದೇವೆ. ಕೊರೋನಾ ವೈರಸ್ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಿ ಹಿಂದೆದಿಗಿಂತಲೂ ಬಲವಾಗಿ ಹೊರಹೊಮ್ಮುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮೂರು ಲಸಿಕೆಗಳು ಅಂತಿಮ ಹಂತದಲ್ಲಿವೆ. ಅವುಗಳನ್ನು ನಾವು ಮುಂಚಿತವಾಗಿ ಉತ್ಪಾದಿಸುತ್ತಿರುವುದರಿಂದ ಅನೇಕ ಡೋಸ್ ಗಳ ದೊರೆಯಲಿವೆ. ಈ ವರ್ಷ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಹೊಂದುತ್ತೇವೆ. ಒಟ್ಟಾಗಿ ಕೋವಿಡ್ ನ್ನು ತೊಲಗಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp