ಭಾರತದ ಆ ಒಂದು ತಂತ್ರ ಫಲಿಸಿದರೆ ಪಾಕಿಸ್ತಾನ ಸರ್ವನಾಶವಾಗಲಿದೆ: ಇಮ್ರಾನ್ ಖಾನ್

ಭಾರತದ ಆ ಒಂದು ತಂತ್ರ ಫಲಿಸಿದರೆ ಪಾಕಿಸ್ತಾನದ ಆರ್ಥಿಕತೆಯೇ ಕುಸಿಯುತ್ತದೆ. ಒಂದು ಅರ್ಥದಲ್ಲಿ ಪಾಕಿಸ್ತಾನ ಸರ್ವನಾಶವಾಗಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ-ಇಮ್ರಾನ್ ಖಾನ್
ಪ್ರಧಾನಿ ಮೋದಿ-ಇಮ್ರಾನ್ ಖಾನ್

ಇಸ್ಲಾಮಾಬಾದ್: ಭಾರತದ ಆ ಒಂದು ತಂತ್ರ ಫಲಿಸಿದರೆ ಪಾಕಿಸ್ತಾನದ ಆರ್ಥಿಕತೆಯೇ ಕುಸಿಯುತ್ತದೆ. ಒಂದು ಅರ್ಥದಲ್ಲಿ ಪಾಕಿಸ್ತಾನ ಸರ್ವನಾಶವಾಗಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವ ಭೀತಿಯನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ. ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿದರೆ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. 

ಅದಾಗಲೇ ಪಾಕಿಸ್ತಾನ ಎಫ್ಎಟಿಎಫ್ ಬೂದೂ ಪಟ್ಟಿ ಸೇರಿರುವುದರಿಂದ ವಾರ್ಷಿಕವಾಗಿ ಸುಮಾರು 10 ಶತಕೋಟಿ ಡಾಲರ್ ಗಳಷ್ಟು ಆರ್ಥಿಕ ಸಹಾಯ ನಿಂತು ಹೋಗಿದೆ. ಇನ್ನು ಕಪ್ಪುಪಟ್ಟಿಗೆ ಸೇರಿದರೆ ಗತಿಯೇನು ಎಂದು ಇಮ್ರಾನ್ ಖಾನ್ ಚಿಂತಿಸುತ್ತಿದ್ದಾರೆ. 

ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ವಾಚ್ ಡಾಗ್ ಫೈನಾನ್ಫಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ಎದುರು ಕೆಂಗಣ್ಣಿಗೆ ಗುರಿಯಾಗಿದೆ. ಭಯೋತ್ಪಾದಯನ್ನು ಮಟ್ಟಹಾಕುವಲ್ಲಿ ವಿಫಲವಾಗಿದ್ದರಿಂದ ಪಾಕಿಸ್ತಾನವನ್ನು ಎರಡು ವರ್ಷಗಳ ಹಿಂದೆ ಗ್ರೇ ಪಟ್ಟಿಗೆ ಸೇರಿಸಿತ್ತು. 

ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಇನ್ನೂ ಮುಂದುವರೆಸಿರುವ ಹಿನ್ನೆಲೆಯಲ್ಲಿ ಆರ್ಥಿಕ ಕಪ್ಪು ಪಟ್ಟಿಗೆ ಸೇರಿಸಲು ಎಫ್ಎಟಿಎಫ್ ಚಿಂತನೆ ನಡೆಸಿದೆ. ಇದೇ ಸದ್ಯ ಇಮ್ರಾನ್ ಖಾನ್ ಅಳಲಿಗೆ ಕಾರಣವಾಗಿದೆ. 

ಇನ್ನು ಭಯೋತ್ಪಾದನೆಯನ್ನು ಮಟ್ಟಹಾಕುವುದನ್ನು ಬಿಟ್ಟು ಇಮ್ರಾನ್ ಖಾನ್, ಭಾರತ ಪಾಕಿಸ್ತಾನವನ್ನು ಸರ್ವನಾಶಗೊಳಿಸಲು ತಂತ್ರ ನಡೆಸಿದೆ. ಹೌದು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com