'ಗಲ್ವಾನ್ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತಿಲ್ಲ ಎಂದಿದ್ದ ಚೀನಾ ಇದೀಗ ವಿಶ್ವದ ಮುಂದೆ ಬೆತ್ತಲಾಗಿದೆ!

ಗಲ್ವಾನ್ ಘರ್ಷಣೆಯಲ್ಲಿ ತಮ್ಮ ಯಾವುದೇ ಸೈನಿಕರು ಮೃತಪಟ್ಟಿಲ್ಲ ಎಂದು ಚೀನಾ ವಾದಿಸುತ್ತಾ ಬಂದಿತ್ತು. ಆದರೆ ಇದೀಗ ಮೃತ ಯೋಧನ ಸಮಾಧಿ ಫೋಟೋ ಅಸಲಿ ಸತ್ಯವನ್ನು ಹೇಳುತ್ತಿದೆ. 
ಕ್ಸಿ ಜಿನ್ ಪಿಂಗ್
ಕ್ಸಿ ಜಿನ್ ಪಿಂಗ್

ಬೀಜಿಂಗ್: ಗಲ್ವಾನ್ ಘರ್ಷಣೆಯಲ್ಲಿ ತಮ್ಮ ಯಾವುದೇ ಸೈನಿಕರು ಮೃತಪಟ್ಟಿಲ್ಲ ಎಂದು ಚೀನಾ ವಾದಿಸುತ್ತಾ ಬಂದಿತ್ತು. ಆದರೆ ಇದೀಗ ಮೃತ ಯೋಧನ ಸಮಾಧಿ ಫೋಟೋ ಅಸಲಿ ಸತ್ಯವನ್ನು ಹೇಳುತ್ತಿದೆ. 

ಗಲ್ವಾನ್ ಘರ್ಷಣೆ ವೇಳೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಈ ಘರ್ಷಣೆ ವೇಳೆ ಚೀನಾದ ಯಾವ ಯೋಧನು ಸಹ ಮೃತಪಟ್ಟಿಲ್ಲ ಎಂದು ಚೀನಾ ವಾದಿಸುತ್ತಾ ಬಂದಿತ್ತು. 

ಘರ್ಷಣೆ ನಡೆದ ಕೆಲ ದಿನಗಳ ಬಳಿಕ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಸಂಪಾದಕ ಸಹ ಚೀನಾ ಯೋಧರು ಮೃತಪಟ್ಟಿರುವುದಾಗಿ ಒಪ್ಪಿಕೊಂಡಿದ್ದರು. ನಂತರ ಇಲ್ಲ ಎಂದು ಹೇಳಿಕೊಂಡು ವಾದಿಸುತ್ತಲೇ ಬರಲಾಗಿತ್ತು. ಅಲ್ಲದೆ ಮೃತಪಟ್ಟಿದ್ದ ಯೋಧರ ಕುಟುಂಬಕ್ಕೆ ವಿಷಯವನ್ನು ತಿಳಿಸದೆ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಬಗ್ಗೆ ಚೀನಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. 

ಇದೀಗ ಚೀನಾದ ಸಾಮಾಜಿಕ ಜಾಲತಾಣವಾದ ವಿಬೋದಲ್ಲಿ ಸೈನಿಕನೊಬ್ಬನ ಸಮಾಧಿ ಫೋಟೋ ವೈರಲ್ ಆಗಿದೆ. ದಕ್ಷಿಣದ ಕ್ಸಿನ್ ಜಿಯಾಂಗ್ ಸೇನಾ ವಲಯದಲ್ಲಿ ಮೃತ ಯೋಧನ ಸಮಾಧಿಯನ್ನು ಸ್ಥಾಪನೆ ಮಾಡಲಾಗಿದೆ. ಇದರ ಮೇಲೆ ಚೆನ್ ಕ್ಸಿಯಾಂಗ್ ರಾಂಗ್, 19316 ಪಡೆಯ ಯೋಧ. 2020ರ ಜೂನ್ ನಲ್ಲಿ ಭಾರತ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮನಾದ ಸೈನಿಕ ಎಂದು ಬರೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com