ಗಲ್ವಾನ್ ಗಲಭೆ ನಂತರ ಸದ್ದಿಲ್ಲದೇ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧ ನೌಕೆ ನಿಯೋಜಿಸಿದ ಭಾರತ! 

ಇತ್ತ ಗಲ್ವಾನ್ ಗಲಭೆ ನಡೆದಿದ್ದರ ಬೆನ್ನಲ್ಲೇ ಭಾರತ ದಕ್ಷಿಣ ಚೀನಾ ಸಮುದ್ರದಲ್ಲಿ ಸದ್ದಿಲ್ಲದೇ ತನ್ನ ಯುದ್ಧ ನೌಕೆ ನಿಯೋಜನೆ ಮಾಡಿದೆ. 
ಯುದ್ಧ ನೌಕೆ
ಯುದ್ಧ ನೌಕೆ

ನವದೆಹಲಿ: ಇತ್ತ ಗಲ್ವಾನ್ ಗಲಭೆ ನಡೆದಿದ್ದರ ಬೆನ್ನಲ್ಲೇ ಭಾರತ ದಕ್ಷಿಣ ಚೀನಾ ಸಮುದ್ರದಲ್ಲಿ ಸದ್ದಿಲ್ಲದೇ ತನ್ನ ಯುದ್ಧ ನೌಕೆ ನಿಯೋಜನೆ ಮಾಡಿದೆ. 

ಭಾರತದ ಈ ನಡೆಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಲ್ವಾನ್ ಗಲಭೆ ನಂತರ ನಂತರ ನಡೆದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲೂ ಸಹ ಈ ವಿಷಯವನ್ನು ಪ್ರಸ್ತಾಪಿಸಿರುವ ಚೀನಾ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.; 

2009 ರಿಂದಲೂ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಕೃತಕ ದ್ವೀಪಗಳನ್ನು ಸೃಷ್ಟಿಸಿ, ಸೇನೆ, ಯುದ್ಧನೌಕೆಗಳ ನಿಯೋಜನೆ ಮೂಲಕ ಆ ಪ್ರದೇಶದಲ್ಲಿ ಏಕಸ್ವಾಮ್ಯ ಹಕ್ಕು ಸ್ಥಾಪನೆಗೆ ಯತ್ನಿಸುತ್ತಿದೆ. 

ಗಲ್ವಾನ್ ಘರ್ಷಣೆ, 20 ಯೋಧರ ಸಾವಿನ ಬೆನ್ನಲ್ಲೇ ಭಾರತ ಸದ್ದಿಲ್ಲದೇ ತನ್ನ ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಎಎನ್ಐ ಗೆ ಸರ್ಕಾರಿ ಮೂಲಗಳು ತಿಳಿಸಿವೆ. 

ದಕ್ಷಿಣ ಚೀನಾ ಸಮುದ್ರದ ಬಳಿ ನಿಯೋಜಿಸಲಾಗಿರುವ ಅಮೆರಿಕ ಯುದ್ಧನೌಕೆಗಳೊಂದಿಗೂ ಸುರಕ್ಷಿತ ಸಂವಹನ ನಡೆಸುತ್ತಿದೆ. 
ಭಾರತದ ಯುದ್ಧ ನೌಕೆಗಳು ಬೇರೆ ದೇಶಗಳ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುತ್ತವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com