ಪಾಕ್‌ನಿಂದ ಮುಕ್ತಿ ಪಡೆದಿದ್ದ ಜಗತ್ತಿನ ಏಕೈಕ ಒಂಟಿ ಆನೆಗೆ ಕಾಂಬೋಡಿಯಾದಲ್ಲಿ ಹೊಸ ಸ್ನೇಹಿತ ಸಿಕ್ಕ!

ಜಗತ್ತಿನ ಏಕೈಕ ಒಂಟಿ 36 ವರ್ಷದ 'ಕಾವನ್' ಆನೆಗೆ ಕೊನೆಗೂ ಕಾಂಬೋಡಿಯಾದಲ್ಲಿ ಹೊಸ ಸ್ನೇಹಿತ ಸಿಕ್ಕಿದೆ. 
ಕಾವನ್ ಆನೆ
ಕಾವನ್ ಆನೆ

ಕಾಂಬೋಡಿಯಾ: ಜಗತ್ತಿನ ಏಕೈಕ ಒಂಟಿ 36 ವರ್ಷದ 'ಕಾವನ್' ಆನೆಗೆ ಕೊನೆಗೂ ಕಾಂಬೋಡಿಯಾದಲ್ಲಿ ಹೊಸ ಸ್ನೇಹಿತ ಸಿಕ್ಕಿದೆ. 

ಕಾವನ್ ಆನೆಗೆ ಎಂಟು ವರ್ಷಗಳಲ್ಲಿ ಮತ್ತೊಂದು ಆನೆಯೊಂದಿಗಿನ ಮೊದಲ ಸಂಪರ್ಕ ಇದಾಗಿದೆ.

 ಪಾಕಿಸ್ತಾನದ ಝೂನಲ್ಲಿದ್ದ ಕಾವನ್ ಆನೆ ಕಾಂಬೋಡಿಯಗೆ ಸ್ಥಳಾಂತರಗೊಂಡಿದ್ದು ಅಲ್ಲಿನ ಅಭಯಾರಣ್ಯದ ಸಹ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ವಾಗತಿಸಿದವು. ಪಾಕಿಸ್ತಾನದ ಮೃಗಾಲಯದಲ್ಲಿನ ಭೀಕರ ಪರಿಸ್ಥಿತಿಗಳ ನಂತರ ಕಾವನ್ ಹೊಸ ಜೀವನವನ್ನು ಪ್ರಾರಂಭಿಸುತ್ತಿದೆ.

ವಿಮಾನ ಮೂಲಕ ಕಾವನ್ ಆನೆಯನ್ನು ಪಾಕಿಸ್ತಾನದಿಂದ ಕಾಂಬೋಡಿಯಾಗೆ ಸ್ಥಳಾಂತರಿಸಲಾಗಿದೆ. "ಎಂಟು ವರ್ಷಗಳ ನಂತರ ಆನೆಯೊಂದಿಗಿನ ಮೊದಲ ಸಂಪರ್ಕ - ಇದು ಕಾವನ್‌ಗೆ ಒಂದು ದೊಡ್ಡ ಕ್ಷಣವಾಗಿದೆ" ಎಂದು ಆಸ್ಟ್ರಿಯಾ ಮೂಲದ ಗುಂಪಿನ ವಕ್ತಾರ ಮಾರ್ಟಿನ್ ಬಾಯರ್ ಹೇಳಿದರು.

ಕಾವನ್ ಆನೆ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡ ನಂತರ ಅದನ್ನು ವಿಶಾಲ ಅಭಯಾರಣ್ಯಕ್ಕೆ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿ ಮೂರು ಹೆಣ್ಣು ಆನೆಗಳು ಇವೆ ಎಂದು ಪರಿಸರ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅನುವಂಶಿಕ ಸಂತಾನ ವೃದ್ಧಿಗೆ" ಸ್ಥಳೀಯ ಆನೆಗಳೊಂದಿಗೆ ಕವಾನ್ ಸಂತಾನೋತ್ಪತ್ತಿ ಮಾಡುವ ಯೋಜನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com