ಕೋವಿಡ್ ಲಸಿಕೆ ಸಂಶೋಧನೆ ರೇಸ್ ನಲ್ಲಿ ಗೆದ್ದ ಬಯೋ‌ಎನ್‌ಟೆಕ್ ಒಂದು ಪುಟ್ಟ ಸಂಸ್ಧೆ!

ಅಮೆರಿಕಾ ಪಾಲುದಾರ ಫಿಜರ್ ಜೊತೆಗೆ, ಬಯೋ‌ಎನ್‌ಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆಗೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ. 
ಬಯೋ‌ಎನ್‌ಟೆಕ್
ಬಯೋ‌ಎನ್‌ಟೆಕ್

ಬರ್ಲಿನ್: ಟರ್ಕಿಯ ಮೂಲದ ಪತಿ-ಪತ್ನಿ ತಂಡವೊಂದು ಪ್ರಾರಂಭಿಸಿದ ಸಣ್ಣ ಜರ್ಮನ್ ಬಯೋ‌ಎನ್‌ಟೆಕ್ ಸಂಸ್ಥೆ ಈ ಮೊದಲು ಯಾವುದೇ ಲಸಿಕೆಯನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಆದರೆ ಕೊರೋನಾದಂತಾ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.

ಹೌದು, ಅಮೆರಿಕಾ ಪಾಲುದಾರ ಫಿಜರ್ ಜೊತೆಗೆ, ಬಯೋಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆಗೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ. 

ಕ್ಯಾನ್ಸರ್ ಪ್ರವರ್ತಕ
ಮೈನ್ಜ್ ಮೂಲದ ಬಯೋಟೆಕ್ ಅನ್ನು 2008 ರಲ್ಲಿ ಉಗುರ್ ಸಾಹಿನ್ ಮತ್ತು ಅವರ ಪತ್ನಿ ಓಜ್ಲೆಮ್ ತುರೆಸಿ, ಟರ್ಕಿಯಿಂದ ಜರ್ಮನಿಗೆ ವಲಸೆ ಬಂದಿದ್ದರು. ನಂತರ ಆಸ್ಟ್ರಿಯಾದ ಕ್ಯಾನ್ಸರ್ ತಜ್ಞ ಕ್ರಿಸ್ಟೋಫ್ ಹ್ಯೂಬರ್ ಜೊತೆ ಸೇರಿ ಬಯೋ‌ಎನ್‌ಟೆಕ್ ಅನ್ನು ಸ್ಥಾಪಿಸಿದ್ದರು.

ಸಾಮಾನ್ಯ ಸಮಯಗಳಲ್ಲಿ, ಬಯೋಟೆಕ್ ಮತ್ತು ಅದರ ಸರಿಸುಮಾರು 1,500 ಉದ್ಯೋಗಿಗಳು ಕ್ಯಾನ್ಸರ್ ರೋಗಿಗಳಿಗೆ ವಿಶೇಷವಾದ ಇಮ್ಯುನೊಥೆರಪಿಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದರು. "ಮೆಸೆಂಜರ್ ಆರ್ ಎನ್ಎ" (ಎಮ್ಆರ್ಎನ್ಎ) ಅಣುಗಳ ಆಧಾರದ ಮೇಲೆ ಜೀವಕೋಶಗಳಲ್ಲಿ ಪ್ರೋಟೀನ್ಗಳ ನಿರ್ಮಾಣವನ್ನು ಪ್ರಚೋದಿಸುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ಕೊರೋನಾವೈರಸ್ ವಿರುದ್ಧ ಸುರಕ್ಷಿತ, ದೃಢವಾದ ಆಕ್ರಮಣವನ್ನು ಪ್ರಚೋದಿಸಲು ಅಗತ್ಯವಾದ ವೈರಲ್ ಪ್ರೋಟೀನ್‌ಗಳನ್ನು ಉತ್ಪಾದಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಿ ಮಾನವ ದೇಹಕ್ಕೆ ಸಂಶ್ಲೇಷಿತ ಎಂಆರ್‌ಎನ್‌ಎ ಪರಿಚಯಿಸುತ್ತದೆ.

ಚೀನಾದ ನಗರವಾದ ವುಹಾನ್‌ನಲ್ಲಿ ಹೊಸ ಮತ್ತು ಮಾರಕ ಕೊರೋನಾವೈರಸ್ ಹುಟ್ಟಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಲಸಿಕೆ ಸಂಶೋಧನೆಗೆ 54 ವರ್ಷದ ಸಾಹಿನ್ ತೊಡಗಿಕೊಂಡಿದ್ದರು. 

ಮಾರ್ಚ್ ನಲ್ಲಿ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಲಾಕ್ಡೌನ್ ಆಗುವ ಹೊತ್ತಿಗೆ, ಬಯೋಎನ್ಟೆಕ್ ಎಮ್ಆರ್ಎನ್ಎ ತಂತ್ರಜ್ಞಾನದ ಆಧಾರದ ಮೇಲೆ 20 ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು ಎಂದು ಅವರು ಡೆರ್ ಸ್ಪೀಗೆಲ್ ವಾರಪತ್ರಿಕೆಗೆ ತಿಳಿಸಿದರು.

ಫಿಜರ್‌ನೊಂದಿಗೆ ಒಪ್ಪಂದ
2018ರಲ್ಲಿ ಎಂಆರ್ಎನ್ಎ ಆಧಾರಿತ ಫ್ಲೂ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲು ಅಮೆರಿಕಾದ ಫಾರ್ಮಾ ದೈತ್ಯ ಫಿಜರ್ ಜೊತೆ ಒಪ್ಪಂದ ಮಾಡಿಕೊಂಡ ನಂತರ, ಸಂಭಾವ್ಯ ಕೊರೋನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಸಕ್ರೀಯವಾಗಿತ್ತು.

ಕೋವಿಡ್ -19 ಮಹಾಮಾರಿಗೆ ಲಸಿಕೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಉಭಯ ಕಂಪನಿಗಳು ಮಾರ್ಚ್‌ನಲ್ಲಿ ಘೋಷಿಸಿದವು, "ಫಿಜರ್‌ನ ಅಭಿವೃದ್ಧಿ, ನಿಯಂತ್ರಕ ಮತ್ತು ವಾಣಿಜ್ಯ ಸಾಮರ್ಥ್ಯಗಳನ್ನು ಬಯೋಟೆಕ್‌ನ ಎಂಆರ್‌ಎನ್ಎ ಲಸಿಕೆ ತಂತ್ರಜ್ಞಾನ ಮತ್ತು ಪರಿಣತಿಯೊಂದಿಗೆ ಜೋಡಿಸುವುದು ಎಂದು ಅವರು ಆ ಸಮಯದಲ್ಲಿ ಹೇಳಿದರು.

ಫಿಜರ್ ಲಸಿಕೆ ಪ್ರಯೋಗದಲ್ಲಿ ಸಕರಾತ್ಮಕ ಫಲಿತಾಂಶ ದೊರಕಿದೆ. ಇದು ಕೊರೋನಾ ಸೋಂಕಿನ ಮೇಲೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com