ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಕೊರೋನ ಲಸಿಕೆ: ಜಪಾನ್

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಕೊರೋನ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿ ಇದಕ್ಕಾಗಿ ವಿಶೇಷ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೋಕಿಯೋ: ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಕೊರೋನ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿ ಇದಕ್ಕಾಗಿ ವಿಶೇಷ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ.

ಜಪಾನ್ ದೇಶದ ಜನತೆಯ ಕೊರೋನ ಲಸಿಕೆ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂಬುದು ಮಸೂದೆಯ ಮುಖ್ಯ ಅಂಶವಾಗಿದೆ ಎರಡು ಮನೆಯಲ್ಲಿ ಮಸೂದೆ ಅಂಗೀಕಾರವಾಗಿದೆ.

ದೇಶದ 60 ಮಿಲಿಯನ್ ಜನರಿಗೆ ಸರ್ಕಾರ ಫ್ರಜಿರ್ ಕಂಪನಿಯ ಲಸಿಕೆ ಮತ್ತು ಉಳಿದ 25 ಮಿಲಿಯನ್ ಜನರಿಗೆ ಮೆಡರೊನ ಎಂಬ ಕಂಪನಿಯ ಲಸಿಕೆಯನ್ನು ನೀಡುವುದಾಗಿ ಹೇಳಿದೆ. ಈ ಎರಡೂ ಕಂಪನಿಗಳ ಕ್ಲಿನಿಕಲ್ ಟ್ರಯಲ್ ಅಮೆರಿಕ ಮತ್ತು ಯುರೋಪ್ ಗಳಲ್ಲಿ ನಡೆದಿದ್ದು, ಉತ್ತಮ ಫಲಿತಾಂಶ ಬಂದಿದೆ ಎನ್ನಲಾಗಿದೆ. 

ಎರಡು ವಾರದ ಹಿಂದೆ ಜಪಾನ್ ಪ್ರಧಾನಿ, ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ.

ದೇಶದ ಜನರಿಗೆ ಲಸಿಕೆ ವಿತರಣೆ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದರು.ಜಪಾನ್ ದೇಶಕ್ಕೆ ಕೊರೋನ ಪರಿಸ್ಥಿತಿ ಅಂತಹ ದೊಡ್ಡ ಹೊಡೆತ ನೀಡಿಲ್ಲ. ಮೇಲಾಗಿ ಕಠಿಣ ಲಾಕ್ ಡೌನ್ ನಿಯಮವನ್ನೂ ಸರ್ಕಾರ ಜಾರಿ ಮಾಡಿರಲೂ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com