ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಶ್ರೀಮಂತೆ ನಾರಾಯಣ ಮೂರ್ತಿ ಪುತ್ರಿ!

ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತ ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಸಿರಿವಂತೆಯಾಗಿದ್ದು, ಪತ್ನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸದೇ ಇರುವ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಟೀಕೆ ಎದುರಿಸುತ್ತಿದ್ದಾರೆ.
ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಶ್ರೀಮಂತೆ ನಾರಾಯಣ ಮೂರ್ತಿ ಪುತ್ರಿ!
ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಶ್ರೀಮಂತೆ ನಾರಾಯಣ ಮೂರ್ತಿ ಪುತ್ರಿ!

ಲಂಡನ್: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತ ಬ್ರಿಟನ್ ರಾಣಿ ಎಲಿಜಬೆತ್-II ಗಿಂತಲೂ ಸಿರಿವಂತೆಯಾಗಿದ್ದು, ಪತ್ನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸದೇ ಇರುವ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಟೀಕೆ ಎದುರಿಸುತ್ತಿದ್ದಾರೆ.

ಬ್ರಿಟೀಷ್ ನ್ಯೂಸ್ ಪೇಪರ್ ದಿ ಗಾರ್ಡಿಯನ್ ಮಾಡಿರುವ ತನಿಖಾ ವರದಿಯ ಪ್ರಕಾರ ರಿಷಿ ಸುನಕ್ ಪತ್ನಿಯ ಆಸ್ತಿ ಕ್ವೀನ್ ಎಲಿಜಬೆತ್ ಗಿಂತಲೂ ಹೆಚ್ಚು ಆಸ್ತಿ ಹೊಂದಿದ್ದಾರೆ. 

ಬ್ರಿಟನ್ ನ ಎಲ್ಲಾ ಸಚಿವರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾಗುತ್ತದೆ. ದಿ ಗಾರ್ಡಿಯನ್ ಪ್ರಕಾರ ಅಕ್ಷತ ಬಳಿ 480 ಮಿಲಿಯನ್ ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ (ಜಿಬಿಪಿ) ಅಥವಾ 4,200 ಕೋಟಿ ಮೊತ್ತದ ಆಸ್ತಿಯನ್ನು ತಮ್ಮ ತಂದೆ ನಾರಾಯಣ ಮೂರ್ತಿ ಅವರ ಟೆಕ್ ಕಂಪನಿ ಇನ್ಫೋಸಿಸ್ ನಲ್ಲಿ ಹೊಂದಿದ್ದಾರೆ. ಇತ್ತ ರಾಣಿ ಎಲಿಜಬೆತ್ ವೈಯಕ್ತಿಕ ಆಸ್ತಿ ಜಿಬಿಪಿ 350 ಮಿಲಿಯನ್ ಅಥವಾ 3,400 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಗಾರ್ಡಿಯನ್ ಸಂಶೋಧನೆಯ ಪ್ರಕಾರ ಅಕ್ಷತ ಮೂರ್ತಿ ಹಾಗೂ ಆಕೆಯ ಕುಟುಂಬ ಸದಸ್ಯರು ಭಾರತದಲ್ಲಿ  ಅಮೇಜಾನ್ ಜೊತೆಗಿನ ಜಂಟಿ ಉದ್ಯಮವೂ ಸೇರಿದಂತೆ ಹಲವೆಡೆ ಹೂಡಿಕೆ ಮಾಡಿದ್ದಾರೆ.

ಬ್ರಿಟನ್ ಸಚಿವರಿಗೆ ಅನ್ವಯವಾಗುವ ನೀತಿ ಸಂಹಿತೆಯ ಪ್ರಕಾರ ಸುನಕ್ ತಮ್ಮ ಪತ್ನಿಯ ಆಸ್ತಿಯ ವಿವರಗಳನ್ನೂ ಬಹಿರಂಗಪಡಿಸಬೇಕಿತ್ತು. ಪತ್ನಿಯ ಆಸ್ತಿಯ ವಿವರಗಳಲ್ಲಿ ರಿಷಿ ಸುನಕ್  ಕ್ಯಾಟಮರನ್ ವೆಂಚರ್ಸ್ ಎಂಬ ಸಣ್ಣ ಉದ್ಯಮ ಸಂಸ್ಥೆಯೊಂದರ ಪತ್ನಿಯ ಮಾಲೀಕತ್ವವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆದರೆ ಬ್ರಿಟನ್ ನ ಇನ್ನೂ 6 ಸಂಸ್ಥೆಗಳ ಮಾಲಿಕತ್ವವನ್ನು ಘೋಷಿಸಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com