ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ವಿರುದ್ಧ ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬೈಡನ್ ಅವರ ಗೆಲುವನ್ನು ಅಮಾನ್ಯ (ರದ್ದುಗೊಳಿಸುವುದು)ಗೊಳಿಸಲು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ

ವಾಷಿಂಗ್ ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬೈಡನ್ ಅವರ ಗೆಲುವನ್ನು ಅಮಾನ್ಯ (ರದ್ದುಗೊಳಿಸುವುದು)ಗೊಳಿಸಲು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಇದಕ್ಕೂ ಮುನ್ನ ಟ್ರಂಪ್ ಹೂಡಿದ್ದ ಮೊಕದ್ದಮೆಗಳನ್ನು ಸ್ಥಳೀಯ ಹಾಗೂ ಫೆಡರಲ್ ನ್ಯಾಯಾಧೀಶರುಗಳು ತಿರಸ್ಕರಿಸಿದ್ದರು. ಸುಪ್ರೀಂ ಕೋರ್ಟ್ ಮೊಕದ್ದಮೆಯನ್ನು ತಿರಸ್ಕರಿಸಿರುವುದರ ಹೊರತಾಗಿಯೂ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಟ್ರಂಪ್ " ಸುಪ್ರೀಂ ಕೋರ್ಟ್ ನಮ್ಮ ಕೈಬಿಟ್ಟಿತು, ಬುದ್ಧಿವಂತಿಕೆ ಇಲ್ಲ, ಧೈರ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. 

ಟ್ರಂಪ್ ಹಾಗೂ 19 ರಿಪಬ್ಲಿಕನ್ ಸ್ಟೇಟ್ ಅಟಾರ್ನಿ ಜನರಲ್ ಗಳು, 126 ಹೌಸ್ ರಿಪಬ್ಲಿಕನ್ ಗಳು ಮಂಡಿಸಿದ್ದ ವಾದವನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಪೂರ್ಣವಾಗಿ ನಿರಾಕರಿಸಿತ್ತು.

ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಆದ್ದರಿಂದ ಫಲಿತಾಂಶವನ್ನು ರದ್ದುಗೊಳಿಸಬೇಕೆಂದು ಟ್ರಂಪ್ ಕೋರ್ಟ್ ಮೊರೆ ಹೋಗಿದ್ದರು ಹಾಗೂ ಕೋರ್ಟ್ ಬುದ್ಧಿವಂತಿಕೆ ಹಾಗೂ ಧೈರ್ಯದಿಂದ ತಮ್ಮ ವಾದವನ್ನು ಪರಿಗಣಿಸಿ ರದ್ದುಗೊಳಿಸಲಿದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ದೃಢವಾಗಿ ತಿರಸ್ಕರಿಸಿದೆ.

ಇದು ಡೊನಾಲ್ಡ್ ಟ್ರಂಪ್ ಗೆ ಒಂದೇ ವಾರದಲ್ಲಿ ಉಂಟಾಗಿರುವ ಎರಡನೇ ಹಿನ್ನಡೆಯಾಗಿದ್ದು, ಇದಕ್ಕೂ ಮುನ್ನ ಪೆನ್ಸಲ್ವೇನಿಯಾ ರಿಪಬ್ಲಿಕನ್ನರು ಮಂಡಿಸಿದ್ದ ವಾದವನ್ನು ನ್ಯಾಯಾಧೀಶರುಗಳು ಮಂಗಳವಾರದಂದು (ಡಿ.8) ತಿರಸ್ಕರಿಸಿ, ಚುನಾವಣೆ ನ್ಯಾಯಸಮ್ಮತವಾಗಿಯೇ ನಡೆದಿದೆ ಎಂದು ಹೇಳಿದ್ದರು.

ಸೋಮವಾರದಂದು (ಡಿ.14) ರಂದು ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕಾಗಿ ನಡೆಯಲಿರುವ ಉನ್ನತ ಮಟ್ಟದ ಸಂವಿಧಾನ ಸಭೆಯಲ್ಲಿ ಜೋ ಬೈಡನ್ ಅವರನ್ನು ಅಮೆರಿಕದ ಮುಂದಿನ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಿ, ಅಧಿಕೃತ ಘೋಷಣೆಯನ್ನೂ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com