ದೇಶದ ಪ್ರಧಾನಿಯೇ ಕೊರೋನಾಗೆ ಬಲಿ!

ಆಫ್ರಿಕಾದ ಈಸ್ವತಿನಿ ದೇಶದ ಪ್ರಧಾನಿ ಅಂಬ್ರೋಸ್ ಡ್ಲಮಿನಿ ( 52) ಕೊರೋನಾದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ದಕ್ಷಿಣ ಆಫ್ರಿಕಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಂಬ್ರೋಸ್ ಡ್ಲಮಿನಿ
ಅಂಬ್ರೋಸ್ ಡ್ಲಮಿನಿ

ಜೊಹಾನ್ಸ್ ಬರ್ಗ್: ಆಫ್ರಿಕಾದ ಈಸ್ವತಿನಿ ದೇಶದ ಪ್ರಧಾನಿ ಅಂಬ್ರೋಸ್ ಡ್ಲಮಿನಿ (52) ಕೊರೋನಾದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ದಕ್ಷಿಣ ಆಫ್ರಿಕಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

"ಪ್ರಧಾನ ಮಂತ್ರಿ ಆಂಬ್ರೋಸ್ ಅಕಾಲಿಕ ನಿಧನದ ವಿಚಾರವನ್ನು ನಾನು ರಾಷ್ಟ್ರಕ್ಕೆ ತಿಳಿಸಬೇಕೆಂದು ಅವರ ಮೆಜೆಸ್ಟೀಸ್ ಆದೇಶಿಸಿದೆ" ಎಂದು ಉಪ ಪ್ರಧಾನಿ ಥೆಂಬಾ ಮಸುಕು ಹೇಳಿದರು.

2018ರ ಅಕ್ಟೋಬರ್‌ನಲ್ಲಿ ಈಸ್ವತಿನಿ ರಾಷ್ಟ್ರದ ಪ್ರಧಾನಿಯಾಗಿ ಆಯ್ಲೆಯಾಗಿದ್ದ ಡ್ಲಮಿನಿ ಇದಕ್ಕೆ ಮುನ್ನ ಹಲವಾರು ವರ್ಷ ಕಾಲ ಬ್ಯಾಂಕೊಂದರಲ್ಲಿ ಸೇವೆ ಸಲ್ಲಿಸಿದ್ದರು. 

1986 ರಿಂದ ಅಧಿಕಾರದಲ್ಲಿರುವ ಈಗಿನ ರಾಜನು ಎಲ್ಲ ಮಂತ್ರಿಗಳನ್ನು ಹೆಸರಿಸುತ್ತಾರೆ ಹಾಗೂ ಸಂಸತ್ತನ್ನು ನಿಯಂತ್ರಿಸುತ್ತಾರೆ. ಈಸ್ವತಿನಿಯಲ್ಲಿಸರ್ಕಾರದ ಪಾತ್ರವು ಸೀಮಿತವಾಗಿದೆ.

ಇನ್ನು ಈಸ್ವತಿಇನಿ ದೇಶವನ್ನು "ಸ್ವಾಜಿಲ್ಯಾಂಡ್" ಎಂದು ಕೂಡ ಕರೆಯಲಾಗುತ್ತದೆ. ಆಫ್ರಿಕಾ ಖಂಡದಲ್ಲಿ ರಾಜಪ್ರಭುತ್ವವಿರುವ ಏಕೈಕ ದೇಶ ಇದಾಗಿದೆ. 1.2 ದಶಲಕ್ಷ ಜನಸಂಖ್ಯೆ ಇರುವ ಈ ರಾಷ್ಟ್ರದಲ್ಲಿ  6,700 ಕ್ಕೂ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು 127 ಸಾವು ಸಂಭವಿಸಿದೆ. ವಿಶ್ವ ಬ್ಯಾಂಕ್ ಪ್ರಕಾರ, ದೇಶದ ಜನಸಂಖ್ಯೆಯ ಶೇಕಡಾ 39 ಕ್ಕಿಂತ ಹೆಚ್ಚು ಜನರು (2016 ಮತ್ತು 2017 ರ ಅಂದಾಜು) ಬಡತನ ರೇಖೆಗಿಂತ ಕೆಳಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com