ಕೋವಿಡ್-19 ಗೆ ಸಂಬಂಧಿಸಿದಂತೆ ಮಹತ್ವದ ವಿಷಯ ಹೇಳಿದ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್

ಅಮೆರಿಕಾದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮುಂದಿನ 4-6 ತಿಂಗಳುಗಳು ಅತ್ಯಂತ ಕರಾಳವಾಗಿರಲಿದೆ ಎಂದು ಹೇಳಿದ್ದಾರೆ.
ಬಿಲ್ ಗೇಟ್ಸ್
ಬಿಲ್ ಗೇಟ್ಸ್

ನ್ಯೂಯಾರ್ಕ್: ಅಮೆರಿಕಾದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮುಂದಿನ 4-6 ತಿಂಗಳುಗಳು ಅತ್ಯಂತ ಕರಾಳವಾಗಿರಲಿದೆ ಎಂದು ಹೇಳಿದ್ದಾರೆ.

ಗೇಟ್ಸ್ ಫೌಂಡೇಶನ್ ಕೋವಿಡ್-19 ಲಸಿಕೆ ಅಭಿವೃದ್ಧಿ ಹಾಗೂ ಡೆಲಿವರಿಯಲ್ಲಿ ತೊಡಗಿಸಿಕೊಂಡಿದೆ ಎಂಬುದು ಗಮನಾರ್ಹವಾಗಿದೆ.

"ದುಃಖಕರವೆಂದರೆ ಮುಂದಿನ 4-6 ತಿಂಗಳುಗಳು ಕೊರೋನಾದಿಂದ ಉಂಟಾಗುವ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿರುತ್ತದೆ.  ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಹಾಗೂ ಎವ್ಯಾಲ್ಯುಯೇಷನ್ (ಐಹೆಚ್ಎಂಇ) ಕೊರೋನಾ ಕಾರಣದಿಂದಾಗಿ 200,000 ಹೆಚ್ಚುವರಿ ಸಾವುಗಳನ್ನು ಅಂದಾಜಿಸಿದೆ. ನಾವು ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.

ಬಿಲ್ ಗೇಟ್ಸ್ ನೀಡಿರುವ ಮಾಹಿತಿಯ ಪ್ರಕಾರ ಅವರ ಫೌಂಡೇಶನ್ ಲಸಿಕೆಗಾಗಿ ನಡೆಯುತ್ತಿರುವ ಸಂಶೋಧನೆಗೆ ಆರ್ಥಿಕ ಸಹಾಯ ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com