ಕೊನೆಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೊನೆಗೆ ಅಭಿನಂದಿಸಿದ್ದಾರೆ. ಆದರೆ, ಬೈಡೆನ್ ಅವರನ್ನು ವಿಳಂಬವಾಗಿ ಅಭಿನಂದಿಸಿದ ನಾಯಕರಲ್ಲಿ ಪುಟಿನ್ ಸಹ ಒಬ್ಬರಾಗಿದ್ದಾರೆ.
ಜೋ ಬೈಡನ್ (ಸಂಗ್ರಹ ಚಿತ್ರ)
ಜೋ ಬೈಡನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೊನೆಗೆ ಅಭಿನಂದಿಸಿದ್ದಾರೆ. ಆದರೆ, ಬೈಡೆನ್ ಅವರನ್ನು ವಿಳಂಬವಾಗಿ ಅಭಿನಂದಿಸಿದ ನಾಯಕರಲ್ಲಿ ಪುಟಿನ್ ಸಹ ಒಬ್ಬರಾಗಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದರೂ ಅಧಿಕೃತ ಫಲಿತಾಂಶ ಪ್ರಕಟಗೊಂಡ ನಂತರ ಬೈಡನ್ ಗೆಲುವನ್ನು ಮಾನ್ಯ ಮಾಡುವುದಾಗಿ ರಷ್ಯಾ ಈ ಹಿಂದೆ ಹೇಳಿತ್ತು.

ಜೋ ಬೈಡನ್ ವಿಜೇತ ಅಭ್ಯರ್ಥಿ ಎಂದು ಸೋಮವಾರ ಎಲಕ್ಟೋಲ್ ಕಾಲೇಜ್ ನಿರ್ಧರಿಸಿದೆ. ನವೆಂಬರ್ 3 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಬಹಳಷ್ಟು ವಿಶ್ವನಾಯಕರು ಬೈಡನ್ ಅವರನ್ನು ಅಭಿನಂದಿಸಿದ್ದರು. 

ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಬೈಡೆನ್ ಉಪಾಧ್ಯಕ್ಷರಾಗಿದ್ದ ಕಾಲದಿಂದಲೂ ಪುಟಿನ್ ಹಾಗೂ ಬೈಡನ್ ಅವರ ನಡುವಿನ ಸಂಬಂಧಗಳು ಅಷ್ಟೊಂದು ಉತ್ತಮವಾಗಿಲ್ಲ.

ನವೆಂಬರ್ 3 ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೋ ಬೈಡೆನ್ 306 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದರೆ, ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ 232 ಮತಗಳು ಬಂದಿವೆ. ಸೋಮವಾರ ಎಲಕ್ಟೋರಲ್ ಕಾಲೇಜ್ ಜೋ ಬೈಡೆನ್ ಅವರ ಗೆಲುವನ್ನು ದೃಢಪಡಿಸುವುದರೊಂದಿಗೆ, ಅಮೆರಿಕ ಅಧ್ಯಕ್ಷರಾಗುವ ಅವರ ಹಾದಿ ಸುಗಮಗೊಂಡಿದೆ. ಬೈಡನ್ ಗೆಲುವನ್ನು ಎಲಕ್ಟೋರಲ್ ಕಾಲೇಜ್ ದೃಢಪಡಿಸಿದರೆ, ಜನವರಿಯಲ್ಲಿ ತಾವು ಅಧ್ಯಕ್ಷೀಯ ಕಾರ್ಯಾಲಯ ತೊರೆಯುವುದಾಗಿ ಟ್ರಂಪ್ ಕಳೆದ ತಿಂಗಳು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com