ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯ ಪುನರರಾಂಭ

ನೇಪಾಳ ದೇಶದ ಸುಪ್ರಸಿದ್ಧ ಪಶು ಪತಿನಾಥ ದೇಗುಲವನ್ನು ಭಕ್ತರ ಸಂದರ್ಶನಕ್ಕಾಗಿ ಬುಧವಾರದಿಂದ  ಮತ್ತೆ ತೆರೆಯಲಾಗಿದೆ.
ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯ ಪುನರರಾಂಭ
ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯ ಪುನರರಾಂಭ

ಕಠ್ಮಂಡು: ನೇಪಾಳ ದೇಶದ ಸುಪ್ರಸಿದ್ಧ ಪಶು ಪತಿನಾಥ ದೇಗುಲವನ್ನು ಭಕ್ತರ ಸಂದರ್ಶನಕ್ಕಾಗಿ ಬುಧವಾರದಿಂದ  ಮತ್ತೆ ತೆರೆಯಲಾಗಿದೆ.  ಕೊರೊನಾದಿಂದಾಗಿ  ಮುಚ್ಚಲಾಗಿದ್ದ ಪಶುಪತಿನಾಥ ದೇವಾಲಯವನ್ನು ಮತ್ತೆ ತೆರೆಯಲಾಗಿದೆ ಎಂದು ಪಶುಪತಿ  ಏರಿಯಾ ಡೆವಲೆಪ್ ಮೆಂಟ್  ಟ್ರಸ್ಟ್ ತಿಳಿಸಿದೆ.

ಕೊರೊನಾ ಕಾರಣದಿಂದ ಮುಚ್ಚಿದ್ದ ಪಶುಪತಿನಾಥ ದೇವಾಲಯವನ್ನು ಸುದೀರ್ಘ ಸಮಯದ ನಂತರ ಮತ್ತೆ  ತೆರೆಯಲು ಕ್ಷಮಾಪಣೆ ಕೋರಿ ದೇಗುಲದಲ್ಲಿ  ಮಂಗಳವಾರ ಪ್ರಾಯಶ್ಚಿತ ಆರಾಧನೆ ನಡೆಸಲಾಯಿತು.

ಕೋವಿಡ್ -19 ಮಾರ್ಗಸೂಚಿ ಅನ್ವಯ ಭಕ್ತರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶವಿದೆ ಎಂದು ಪಶುಪತಿ ಟ್ರಸ್ಟ್ ಸದಸ್ಯ ಪ್ರದೀಪ್ ಧಕಲ್ ತಿಳಿಸಿದ್ದಾರೆ. 

ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಾಲಯ ತರೆದಿದ್ದರೂ ವಿಶೇಷ ಪೂಜೆಗಳು, ಶ್ಲೋಕಗಳ ಪಠಣ, ಮತ್ತಿತರ ಧಾರ್ಮಿಕ ಚಟುವಟಿಕೆ ನಡಸುವುದಿಲ್ಲ. ಈ ಚಟುವಟಿಕೆಗಳನ್ನು ಕ್ರಮೇಣ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com