ಲಡಾಖ್ ನಲ್ಲಿ ವಿವಾದದ ನಡುವೆ ನೂತನ ಮಿಲಿಟರಿ ಕಮಾಂಡರ್ ನೇಮಿಸಿದ ಚೀನಾ-ವರದಿ

 ಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕಮಾಂಡರ್ ಆಗಿ  ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕಮಾಂಡರ್ ಆಗಿ  ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ.

ಎರಡು ಮಿಲಿಯನ್ ನಷ್ಟು ಬಲ ಹೊಂದಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ಹೈಕಮಾಂಡ್, ಕೇಂದ್ರಿಯ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿರುವ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್, ವೆಸ್ಟರ್ನ್ ಥಿಯೇಟರ್ ಕಮಾಂಡ್ ನ ಕಮಾಂಡ್ ಆಗಿ ಜನರಲ್ ಜಾಂಗ್ ಕ್ಸುಡಾಂಗ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ನಾಲ್ಕು ಹಿರಿಯ ಮಿಲಿಟರಿ ಮತ್ತು ಸಶಸ್ತ್ರ ಪೊಲೀಸ್ ಅಧಿಕಾರಿಗಳಿಗೆ ಕ್ಸಿ- ಜಿನ್ ಪಿಂಗ್  ಬಡ್ತಿ ನೀಡಿದ್ದಾರೆ. ಅವರಲ್ಲಿ ಪಿಎಲ್‌ಎ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕಮಾಂಡರ್ ಜನರಲ್ ಜಾಂಗ್ ಕೂಡ ಇದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ಸಿನ್ಹುವಾ ವರದಿ ಮಾಡಿದೆ.

ಪೂರ್ವ ಲಡಾಖ್ ನಲ್ಲಿ ಚೀನಾ ಸಹಸ್ರಾರು ಸೇನೆಪಡೆಯನ್ನು ನಿಯೋಜಿಸಿದ ನಂತರ ಮೇ ತಿಂಗಳಿನಿಂದ ಭಾರತ ಹಾಗೂ ಚೀನಾ ನಡುವೆ ಸಂಘರ್ಷವೇರ್ಪಟ್ಟಿದೆ. ಬಿಕ್ಕಟ್ಟು ಪರಿಹಾರಕ್ಕೆ ಉಭಯ ರಾಷ್ಟ್ರಗಳ ನಡುವೆ ಅನೇಕ ಬಾರಿ ಮಿಲಿಟರಿ ಹಾಗೂ ರಾಯಭಾರಿ ಮಟ್ಟದ ಮಾತುಕತೆಗಳು ನಡೆದಿವೆ. ಕಳೆದ 18 ರಂದು ಉಭಯ ದೇಶಗಳ ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಕೂಡಾ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com