ಮಹಾಮಾರಿಯ ರೂಪಾಂತರ: ನೈಜೀರಿಯಾದಲ್ಲಿ ಮತ್ತೊಂದು ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿರುವ ಶಂಕೆ
ಬ್ರಿಟನ್‌ನಲ್ಲಿ ಹೊಸ ರೂಪಾಂತರದ ಕೊರೋನಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ, ನೈಜೀರಿಯಾದಲ್ಲಿ ಕೂಡ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದೆ ಎಂದು ಆಫ್ರಿಕಾದ ಆರೋಗ್ಯ ಇಲಾಖೆ ಮಾಹಿತಿ ನಿಡಿದೆ.
Published: 24th December 2020 07:58 PM | Last Updated: 24th December 2020 07:58 PM | A+A A-

ಸಂಗ್ರಹ ಚಿತ್ರ
ಲಾಗೋಸ್: ಬ್ರಿಟನ್‌ನಲ್ಲಿ ಹೊಸ ರೂಪಾಂತರದ ಕೊರೋನಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ, ನೈಜೀರಿಯಾದಲ್ಲಿ ಕೂಡ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದೆ ಎಂದು ಆಫ್ರಿಕಾದ ಆರೋಗ್ಯ ಇಲಾಖೆ ಮಾಹಿತಿ ನಿಡಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಆರೋಗ್ಯ ಅಧಿಕಾರಿಯೊಬ್ಬರು, ಈ ಕುರಿತು ಇನ್ನೂ ತನಿಖೆ ನಡೆಯಬೇಕಿದೆ. ಆದರೆ, ಇದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದ ಸೋಂಕಿಗಿಂತ ಭಿನ್ನವಾಗಿದೆ ಎಂದಿದ್ದಾರೆ.
ಈ ಸೋಂಕಿನಿಂದ ಅಪಾಯದ ಪ್ರಮಾಣ ಎಷ್ಟಿರಲಿದೆ ಎಂಬುದರ ಕುರಿತು ಈಗಲೇ ಮಾಹಿತಿ ನೀಡಲಾಗದು ಎಂದು ಅವರು ತಿಳಿಸಿದ್ದಾರೆ.
ತಜ್ಞರು ಹೆಚ್ಚಿನ ರೂಪಾಂತರ ವೈರಸ್ ಹಾನಿಕಾರಕವಾಗಿದ್ದರೂ ಅಥವಾ ಯಾವುದೇ ಪರಿಣಾಮವನ್ನು ಬೀರುವುದಿಲ್ಲವಾದರೂ, ಈ ಹೊಸ ರೂಪಾಂತರದಲ್ಲಿನ ಕೆಲವು ರೂಪಾಂತರಿತ ಕೊರೋನಾ ಹೇಗೆ ಹರಡುತ್ತವೆ ಎಂಬುದರ ಮೇಲೆ ಪರಿಣಾಮ ಬೀರಬಹುದೆಂದು ಹೇಳಿದ್ದಾರೆ.