ಜನತೆಯ ಹಿತದೃಷ್ಟಿಯಿಂದ ಕೋವಿಡ್-19 ಮೊಬೈಲ್ ಆ್ಯಪ್ ಆರಂಭಿಸಿದ ಡಬ್ಲ್ಯುಎಚ್‌ಓ

ಕೋವಿಡ್ -19 ಗೈಡೆನ್ಸ್, ಅಪ್ ಡೇಟ್ಸ್ ಗಳನ್ನು ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಬಿಡುಗಡೆ ಮಾಡಿದೆ. 

Published: 25th December 2020 10:40 PM  |   Last Updated: 25th December 2020 10:40 PM   |  A+A-


WHO

ಡಬ್ಲ್ಯುಎಚ್ಓ

Posted By : Vishwanath S
Source : UNI

ನವದೆಹಲಿ: ಕೋವಿಡ್ -19 ಗೈಡೆನ್ಸ್, ಅಪ್ ಡೇಟ್ಸ್ ಗಳನ್ನು ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಬಿಡುಗಡೆ ಮಾಡಿದೆ. 

ಈ ಅಪ್ಲಿಕೇಶನ್ ಹೆಸರು ಡಬ್ಲ್ಯುಎಚ್ಓ ಕೋವಿಡ್-19 ಅಪ್ ಡೇಟ್ಸ್(WHO COVID-19 Updates). ಈ ಅಪ್ಲಿಕೇಶನ್ ಕೊರೊನಾ ವೈರಸ್ ಕುರಿತು ಸಂಪೂರ್ಣ ವಿಶ್ವಾಸಾರ್ಹ ಮಾಹಿತಿ ಒಳಗೊಂಡಿರಲಿದೆ. ಆದರೆ, ಇದು ಸಂಪರ್ಕ ಪತ್ತೆ ಹಚ್ಚುವಿಕೆಯಂತಹ ವಿಶೇಷತೆ ಹೊಂದಿಲ್ಲ. 

ಈ ವರ್ಷದ ಏಪ್ರಿಲ್ ನಲ್ಲಿಯೇ ಕೊರೊನಾ ವೈರಸ್ ಅಪ್ಲಿಕೇಶನ್ ಪರಿಚಯಿಸಿತಾದರೂ, ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣ ಆ್ಯಪ್ ಸ್ಟೋರ್ ಗಳು ಅದನ್ನು ತೆಗೆದುಹಾಕಿದ್ದವು.

ಡಬ್ಲ್ಯುಎಚ್ಓ ಕೋವಿಡ್-19 ಅಪ್ ಡೇಟ್ಸ್ ಅಪ್ಲಿಕೇಶನ್ ತಾಜಾ ಸ್ಥಳೀಯ ಮಾಹಿತಿ ಆಧಾರದ ಮೇಲೆ ನೈಜ-ಸಮಯದ ಅಧಿಸೂಚನೆಗಳನ್ನು  ಒದಗಿಸಲಿದೆ.

ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ತಿಳಿಯಲು, ದೇಶ ಹಾಗೂ ವಿಶ್ವದಾದ್ಯಂತ ನೊಂದಾಯಿತ ಪ್ರಕರಣಗಳ ಸಂಖ್ಯೆಯನ್ನು ಕಾಲ-ಕಾಲಕ್ಕೆ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದೆ. ಆರೋಗ್ಯ ವಿಷಯದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಒಳಗೊಂಡಿರಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಪ್ರತಿಕ್ರಿಯೆ ನಿಧಿಗೆ ದೇಣಿಗೆ ನೀಡಲು ಬಯಸುವವರು ಈ ಆ್ಯಪ್ ಮೂಲಕ ದೇಣಿಗೆ ನೀಡಬಹುದು.


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp