ಅಧಿಕಾರಕ್ಕೆ ಬಂದ ಕೂಡಲೆ 11 ಮಿಲಿಯನ್ ದಾಖಲೆರಹಿತ ಜನರಿಗೆ ನಾಗರಿಕತ್ವ ಕೊಡುವ ಮಸೂದೆ: ಕಮಲಾ ಹ್ಯಾರಿಸ್ 

11 ಮಿಲಿಯನ್ ದಾಖಲೆರಹಿತ ಜನರಿಗೆ ನಾಗರಿಕತ್ವ ನೀಡುವ ನೀಲನಕ್ಷೆಯನ್ನು ಸದನದಲ್ಲಿ ಮಂಡಿಸುವ ಭರವಸೆಯನ್ನು ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್

ವಾಷಿಂಗ್ಟನ್ ಡಿಸಿ: 11 ಮಿಲಿಯನ್ ದಾಖಲೆರಹಿತ ಜನರಿಗೆ ನಾಗರಿಕತ್ವ ನೀಡುವ ನೀಲನಕ್ಷೆಯನ್ನು ಸದನದಲ್ಲಿ ಮಂಡಿಸುವ ಭರವಸೆಯನ್ನು ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಇದನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿರುವ ಅವರು, ತಾವು ಅಧಿಕಾರ ವಹಿಸಿಕೊಂಡ ನಂತರ ಮಾಡುವ ಪ್ರಮುಖ ಕೆಲಸ, ತಮ್ಮ ಮೊದಲ ಆದ್ಯತೆ ದೇಶದಲ್ಲಿ ಕೊರೋನಾ ವೈರಸ್ ನ್ನು ತಡೆಗಟ್ಟುವುದು, ಅಧ್ಯಕ್ಷ ಜೊ ಬೈಡನ್ ಅವರ ಜೊತೆಗೂಡಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸೇರಲು ಬದ್ಧವಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತ ಈ ಹಿಂದೆ ಒಪ್ಪಂದದಿಂದ ಹಿಂದೆ ಸರಿದಿತ್ತು. ನಾವು ಡ್ರೀಮರ್ಸ್ ನ್ನು ಕಾಪಾಡಲು ಕ್ರಮ ಕೈಗೊಳ್ಳುತ್ತಿದ್ದು, ಅಮೆರಿಕ ಕಾಂಗ್ರೆಸ್ ಗೆ ಮಸೂದೆ ಕಳುಹಿಸುತ್ತೇವೆ. ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಸೇರುತ್ತೇವೆ, ಇದು ಕೇವಲ ಆರಂಭವಷ್ಟೆ ಎಂದು ಹೇಳಿಕೊಂಡಿದ್ದಾರೆ.

ಡ್ರೀಮರ್ಸ್ ಎಂದರೆ, ವಲಸೆ ಯುವಕರನ್ನು ಉಲ್ಲೇಖಿಸಿ ಹೇಳಲಾಗುತ್ತಿದ್ದು,ಇವರು ಅಭಿವೃದ್ಧಿ, ಪರಿಹಾರ ಮತ್ತು ಶಿಕ್ಷಣಕ್ಕಾಗಿ ಏಲಿಯನ್ ಅಪ್ರಾಪ್ತ ವಯಸ್ಕರ (ಡ್ರೀಮ್) ಕಾಯ್ದೆಗೆ ಅರ್ಹರಾಗಿದ್ದಾರೆ. ಈ ಕಾರ್ಯಕ್ರಮವು ದಾಖಲೆರಹಿತ ವಲಸಿಗರಿಗೆ (ದಾಖಲೆರಹಿತ ಜನರು) ಗಡೀಪಾರು ಆಗುವ ಭಯವಿಲ್ಲದೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ತಾತ್ಕಾಲಿಕ ರಕ್ಷಣೆ ನೀಡುತ್ತದೆ.

ಈ ಹಿಂದೆ, ಡ್ರೀಮರ್ಸ್ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಈ ಯುವಜನರಿಗೆ ತಾತ್ಕಾಲಿಕ, ನವೀಕರಿಸಬಹುದಾದ ರಕ್ಷಣೆಗಳನ್ನು ನೀಡಲು ಒಬಾಮಾ ಆಡಳಿತವು ರಚಿಸಿದ ಡಿಫೆರ್ಡ್ ಆಕ್ಷನ್ ಫಾರ್ ಚೈಲ್ಡುಹುಡ್ ಆಗಮನ (ಡಿಎಸಿಎ) ಕಾರ್ಯಕ್ರಮವನ್ನು ರದ್ದುಗೊಳಿಸಲು ಟ್ರಂಪ್ ಆಡಳಿತವು ಈ ಹಿಂದೆ ಯೋಜಿಸಿತ್ತು.ತಾತ್ಕಾಲಿಕ, ನವೀಕರಿಸಬಹುದಾದ ರಕ್ಷಣೆಗಳನ್ನು ಯುವಕರಿಗೆ ನೀಡಲಾಗುತ್ತಿದ್ದು ಅದರ ಅಡ್ಡಹೆಸರು ಡ್ರೀಮರ್ಸ್ ಎಂಬುದಾಗಿದೆ.

ಹವಾಮಾನ ಬದಲಾವಣೆಯ ಆತಂಕದ ಮಧ್ಯೆ ಜಾಗತಿಕ ಪ್ರತಿಕ್ರಿಯೆಯನ್ನು ಬಲಪಡಿಸಲು ಪ್ಯಾರಿಸ್ ಒಪ್ಪಂದವನ್ನು 2015 ರಲ್ಲಿ ತರಲಾಯಿತು. ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಈ ಶತಮಾನದ ಜಾಗತಿಕ ತಾಪಮಾನ ಏರಿಕೆಯನ್ನು 2 ಸಿ ಗಿಂತಲೂ ಕಡಿಮೆ ಇರಿಸಿಕೊಳ್ಳಲು ಮತ್ತು ತಾಪಮಾನ ಹೆಚ್ಚಳವನ್ನು ಇನ್ನೂ 1.5 ಸಿ ಗೆ ಸೀಮಿತಗೊಳಿಸುವ ಪ್ರಯತ್ನಗಳನ್ನು ಮುಂದುವರಿಸಲು ಇದು ಉದ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com