ಆ ವ್ಯಕ್ತಿಗೆ ಪ್ರಯಾಣದ ಹಿನ್ನೆಲೆಯೇ ಇಲ್ಲ, ಆದರೂ ರೂಪಾಂತರಿ ಕೋವಿಡ್ ಸೋಂಕಿಗೆ ಗುರಿಯಾದ! 

ಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿಶ್ವಾದ್ಯಂತ ಹರಡುತ್ತಿದೆ. ಆದರೆ ಇದೇ ಮಾದರಿಯ ವೈರಾಣು ಸೋಂಕು ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. 
ಆ ವ್ಯಕ್ತಿಗೆ ಪ್ರಯಾಣದ ಹಿನ್ನೆಲೆಯೇ ಇಲ್ಲ, ಆದರೂ ರೂಪಾಂತರಿ ಕೋವಿಡ್ ಸೋಂಕಿಗೆ ಗುರಿಯಾದ!
ಆ ವ್ಯಕ್ತಿಗೆ ಪ್ರಯಾಣದ ಹಿನ್ನೆಲೆಯೇ ಇಲ್ಲ, ಆದರೂ ರೂಪಾಂತರಿ ಕೋವಿಡ್ ಸೋಂಕಿಗೆ ಗುರಿಯಾದ!

ಡೆನ್ವರ್: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿಶ್ವಾದ್ಯಂತ ಹರಡುತ್ತಿದೆ. ಆದರೆ ಇದೇ ಮಾದರಿಯ ವೈರಾಣು ಸೋಂಕು ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿಗೆ ಪ್ರಯಾಣದ ಯಾವುದೇ ಹಿನ್ನೆಲೆ ಇಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. 

ಅಮೆರಿಕದ ಕೊಲೊರಾಡೋದಲ್ಲಿ ಈ ಹೊಸ ಕೊರೋನಾ ಸೋಂಕು ದೃಢಪಟ್ಟಿದ್ದು, 20 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಅಮೆರಿಕನ್ನರಿಗೆ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡುವುದಕ್ಕೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. 

ಅಮೆರಿಕದ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಹೊಸ ಸೋಂಕು ಪೀಡಿತ ವ್ಯಕ್ತಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇರಲಿಲ್ಲ ಎಂದು ಹೇಳಿದೆ. ಸೋಂಕು ಪೀಡಿತನನ್ನು ಎಲ್ಬರ್ಟ್ ಕೌಂಟಿಯ ಡೆನ್ವರ್‌ನ ಆಗ್ನೇಯ ಭಾಗದಲ್ಲಿ ಐಸೊಲೇಷನ್ ಗೆ ಒಳಪಡಿಸಲಾಗಿದೆ. 

ಇದೇ ರಾಜ್ಯದಲ್ಲಿ ಮತ್ತೊಂದು ರೂಪಾಂತರಿ ಕೊರೋನಾ ಪ್ರಕರಣವೂ ಇರುವ ಶಂಕೆಯನ್ನು ಅಮೆರಿಕ ಆರೋಗ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com