ಕೊರೋನಾ ವೈರಸ್: ಚೀನಾದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ

ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ವಿದೇಶಿಗರಿಗೆ ಇ-ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 
ಕೊರೋನಾ ವೈರಸ್: ಚೀನಾದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ
ಕೊರೋನಾ ವೈರಸ್: ಚೀನಾದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ

ಬೀಜಿಂಗ್: ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ವಿದೇಶಿಗರಿಗೆ ಇ-ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಚೀನಾದಲ್ಲಿ ಈ ವರೆಗೆ ಕೊರೋನಾ ವೈರಸ್ ಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 14,562 ಜನರು ಸೋಂಕು ಪೀಡಿತರಾಗಿದ್ದಾರೆ. ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ 25 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಹರಡಿದೆ. 

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಇ-ವೀಸಾಗಳ ಮೂಲಾ ಭಾರತಕ್ಕೆ ಪ್ರಯಾಣ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಘೋಷಿಸಿದೆ.

ಚೀನಾದಲ್ಲಿರುವ ಬೇರೆ ದೇಶದವರು ಹಾಗೂ ಚೀನಾ ಪಾಸ್ಪೋರ್ಟ್ ಗಳನ್ನು ಹೊಂದಿರುವವರಿಗೆ ಈ ನಿಯಮ ಅನ್ವಯವಾಗಲಿದೆ.  ಈಗಾಗಲೇ ಇ-ವೀಸಾಗಳನ್ನು ಹೊಂದಿರುವವರದ್ದೂ ಅಸಿಂಧುಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com