ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು

ಅಮೆರಿಕದ ಉತ್ತರ ಟೆಕ್ಸಾಸ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ ಶೂಟಿಂಗ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು
ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು

ಹೂಸ್ಟನ್: ಅಮೆರಿಕದ ಉತ್ತರ ಟೆಕ್ಸಾಸ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ ಶೂಟಿಂಗ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.

ಹೂಸ್ಟನ್‌ನ ಉತ್ತರಕ್ಕೆ ಸುಮಾರು 480 ಕಿ.ಮೀ ದೂರದಲ್ಲಿರುವ ಟೆಕ್ಸಾಸ್ ಎ & ಎಂ ಯೂನಿವರ್ಸಿಟಿ ಕ್ಯಾಂಪಸ್ ಸಭಾಂಗಣದಲ್ಲಿ ಮಧ್ಯಾಹ್ನ ಈ ಘಟನೆ ಜರುಗಿದೆ ಎಂದೂ ಕ್ಸಿನ್ಹುವಾ ವರದಿ ಮಾಡಿದೆ.

ಗುಂಡಿನ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವುದು ಹಾಗೂ 2 ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡಿರುವುದು ಕಂಡು ಬಂದಿತ್ತು. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಇದೀಗ ಪ್ರಾಣಾಪಾಯದಿಂದ ಪಾರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com