ಟ್ರಂಪ್ ಭಾಷಣದ ಪ್ರತಿ ಹರಿದು ಹಾಕಿದ ಸ್ಪೀಕರ್ ನ್ಯಾನ್ಸಿ ಪೆಲೋಸಿ,ಶ್ವೇತ ಭವನ ಖಂಡನೆ 

ಅಮೆರಿಕಾ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ಕಳೆದ ರಾತ್ರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮುಗಿದ ನಂತರ ಅವರ ಭಾಷಣದ ಪ್ರತಿಗಳನ್ನು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹರಿದು ಹಾಕಿದ ಪ್ರಸಂಗ ನಡೆಯಿತು.
ಭಾಷಣದ ಪ್ರತಿ ಹರಿದುಹಾಕುತ್ತಿರುವುದು
ಭಾಷಣದ ಪ್ರತಿ ಹರಿದುಹಾಕುತ್ತಿರುವುದು

ವಾಷಿಂಗ್ಟನ್: ಅಮೆರಿಕಾ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ಕಳೆದ ರಾತ್ರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮುಗಿದ ನಂತರ ಅವರ ಭಾಷಣದ ಪ್ರತಿಗಳನ್ನು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹರಿದು ಹಾಕಿದ ಪ್ರಸಂಗ ನಡೆಯಿತು.


ಉಕ್ರೈನ್ ಸರ್ಕಾರದ ಮೂಲಕ ಪ್ರತಿಸ್ಪರ್ಧಿ ಜಾಯ್ ಬಿಡೆನ್ ವಿರುದ್ಧ ತನಿಖೆಗೆ ಆದೇಶಿಸಲು ಪ್ರಭಾವ ಬೀರಿದ್ದಾರೆ ಎಂದು ದೋಷಾರೋಪ ಎದುರಿಸಿದ ನಂತರ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣ ಇದಾಗಿದ್ದು, ಭಾಷಣ ಮುಗಿದ ನಂತರ ಸ್ಪೀಕರ್ ಕೈಕುಲುಕಲು ಮುಂದೆ ಕೈ ಚಾಚಿದಾಗ ಡೊನಾಲ್ಡ್ ಟ್ರಂಪ್ ಅವರು ಅದಕ್ಕೆ ಪ್ರತಿ ಸ್ಪಂದಿಸಲಿಲ್ಲ.


ಡೊನಾಲ್ಡ್ ಟ್ರಂಪ್ ಅವರು ಭಾಷಣ ಮಾಡುತ್ತಿದ್ದಾಗ ರಿಪಬ್ಲಿಕನ್ ಸದಸ್ಯರು ಚಪ್ಪಾಳೆ ತಟ್ಟಿ ಮಾತಿಗೆ ಅನುಮೋದಿಸುತ್ತಿದ್ದರೆ ಪೆಲೋಸಿ ಕೋಪದಿಂದ ಪದೇ ಪದೇ ತಲೆ ಅಲ್ಲಾಡಿಸುತ್ತಾ ಅಧ್ಯಕ್ಷರ ಮಾತುಗಳನ್ನು ನಂಬದೆ ನಗೆ ಬೀರಿದರು. ಭಾಷಣ ಮುಗಿಯುತ್ತಿದ್ದಂತೆ ತಮ್ಮ ಸೀಟಿನಿಂದ ಮೇಲೆದ್ದು ಎಲ್ಲರ ಮುಂದೆ ಪ್ರತಿಯನ್ನು ಹರಿದು ಹಾಕಿದರು.


ನಂತರ ಒಬ್ಬ ಸುದ್ದಿಗಾರರು ನೀವು ಏಕೆ ಭಾಷಣದ ಪ್ರತಿ ಹರಿದುಹಾಕಿದಿರಿ ಎಂದು ಕೇಳಿದಾಗ, ಪರ್ಯಾಯ ವಿಚಾರವನ್ನು ಪರಿಗಣಿಸಿ ಆ ಸಂದರ್ಭದಲ್ಲಿ ಮಾಡುವ ವಿನಯಶೀಲ ಕೆಲಸ ಅದಾಗಿತ್ತು ಎಂದರು. ನಂತರ ಟ್ವೀಟ್ ಮಾಡಿ,ನಿಮ್ಮ ಕೆಲಸ ಮಾಡಿಸಿಕೊಳ್ಳಲು ಸ್ನೇಹಕ್ಕಾಗಿ ಕೈ ಚಾಚುವುದನ್ನು ಎಂದಿಗೂ ನಿಲ್ಲಿಸಬೇಡಿ ಎಂದರು.


ಡೆಮಾಕ್ರಟಿಕ್ ನಿಯಂತ್ರಣವಿರುವ ಸದನದಿಂದ ಆರು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ದೋಷಾರೋಪಕ್ಕೆ ಒಳಗಾಗಿದ್ದರು. ತಮ್ಮ ಮೇಲೆ ದೋಷಾರೋಪ ಹೊರಿಸಿದ್ದಕ್ಕೆ ಸ್ಪೀಕರ್ ಅವರನ್ನು ಟ್ರಂಪ್ ವಂಚಕಿ, ನರ ನ್ಯಾನ್ಸಿ,ಕ್ರೇಜಿ ನ್ಯಾನ್ಸಿ ಎಂದು ಟ್ವಿಟ್ಟರ್ ನಲ್ಲಿ ಕರೆದಿದ್ದರು.


ಅಮೆರಿಕಾದ ಶ್ವೇತ ಭವನ ಸ್ಪೀಕರ್ ಅವರು ಭಾಷಣದ ಪ್ರತಿ ಹರಿದು ಹಾಕಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕಾ ಅಧ್ಯಕ್ಷರಿಗೆ ಅಗೌರವ ತೋರಿಸಿದ್ದಾರೆ, ಅದು ಅವರ ಪರಂಪರೆಯನ್ನು ತೋರಿಸುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com