ಕೊರೋನಾ ವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 560ಕ್ಕೇರಿಕೆ

ಚೀನಾದಲ್ಲಿ ಮಾರಣಾಂತಿಕ ನೋವೆಲ್ ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 560ಕ್ಕೇರಿದ್ದು, 28,018 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ರಾಜ್ಯ ಆರೋಗ್ಯ ಸಮಿತಿ ಗುರುವಾರ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಚೀನಾದಲ್ಲಿ ಮಾರಣಾಂತಿಕ ನೋವೆಲ್ ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 560ಕ್ಕೇರಿದ್ದು, 28,018 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ರಾಜ್ಯ ಆರೋಗ್ಯ ಸಮಿತಿ ಗುರುವಾರ ವರದಿ ಮಾಡಿದೆ.

ಇಲ್ಲಿಯವರೆಗೆ 1153 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಫೆ. 5ರ ಮಧ್ಯರಾತ್ರಿಯವರೆಗೆ ದೇಶದ 31 ಪ್ರಾಂತ್ಯಗಳಲ್ಲಿ ಸುಮಾರು 28018 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 3859 ಜನರ ಸ್ಥಿತಿ ಗಂಭೀರವಾಗಿದೆ ಎಂದು ಸಮಿತಿ ತಿಳಿಸಿದೆ.

ಕೊರೋನಾ ವೈರಸ್ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲು ಚೀನಾ ಸಾಕಷ್ಟು ವ್ಯವಸ್ಥೆಗಳನ್ನುು ಮಾಡಿದೆ. ಸಾರ್ವಜನಿಕ ಕಟ್ಟಡಗಳನ್ನೇ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಳಗಳನ್ನಾಗಿ ಮಾರ್ಪಡಿಸಿಕೊಂಡಿದೆ. ಆದರೂ,  ದಿನದಿಂದ ದಿನಕ್ಕೆ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಗಳಲ್ಲೂ ಕೊರತೆಗಳು ಕಂಡು ಬರುತ್ತಿದೆ.  ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ರೋಗಿಗಳು ಪರದಾಡುವಂತೆ ಸ್ಥಿತಿ ಎದುರಾಗಿದೆ. ಇದಲ್ಲದೆ, ಚಿಕಿತ್ಸೆ ನೀಡಲು ಅಗತ್ಯವಿರುವ ವಸ್ತುಗಳ ಕೊರತೆಗಳೂ ಕೂಡ ಎದುರಾಗುತ್ತಿವೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com