ಇಸ್ತಾಂಬುಲ್: ರನ್ ವೇಯಲ್ಲಿ ಸ್ಕೀಡಾಗಿ ತುಂಡು ತುಂಡಾದ ವಿಮಾನ ,120 ಪ್ರಯಾಣಿಕರು ಗಾಯ

ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕೀಡಾಗಿ ತುಂಡು ತುಂಡಾಗಿರುವ  ಘಟನೆ ನಡೆದಿದೆ.
ತುಂಡಾದ ವಿಮಾನ
ತುಂಡಾದ ವಿಮಾನ

ಇಸ್ತಾಂಬುಲ್ : ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕೀಡಾಗಿ ತುಂಡು ತುಂಡಾಗಿರುವ  ಘಟನೆ ನಡೆದಿದೆ.

ತುಂಡಾದ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಾಯಗೊಂಡಿರುವ 120 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಡಳಿತ ಸಂಸ್ಥೆಗಳು ತಿಳಿಸಿವೆ.

177 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಕಡಿಮೆ ಬೆಲೆಯ ಪೆಗಾಸಸ್ ಏರ್ ಲೈನ್ಸ್ ವಿಮಾನ ಪಶ್ಚಿಮ ಟರ್ಕಿಶ್ ನ  ಇಜ್ಮಿರ್ ನಿಂದ ಇಸ್ತಾಂಬುಲ್ ನ  ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ತುರ್ತು ಭೂ ಸ್ಪರ್ಶದಿಂದಾಗಿ ಈ ಘಟನೆ ನಡೆದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com