ಇಸ್ತಾಂಬುಲ್: ರನ್ ವೇಯಲ್ಲಿ ಸ್ಕಿಡ್ ಆಗಿ ತುಂಡು ತುಂಡಾದ ವಿಮಾನ, 3 ಸಾವು, 179 ಮಂದಿಗೆ ಗಾಯ

ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕಿಡ್ ಆಗಿ ತುಂಡು ತುಂಡಾಗಿರುವ ಘಟನೆ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸ್ಕಿಡ್ ಆದ ವಿಮಾನ
ಸ್ಕಿಡ್ ಆದ ವಿಮಾನ

ಇಸ್ತಾಂಬುಲ್​: ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕಿಡ್ ಆಗಿ ತುಂಡು ತುಂಡಾಗಿರುವ ಘಟನೆ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಭೀಕರ ದುರಂತದಲ್ಲಿ ಮೂವರು ಮೃತಪಟ್ಟಿದ್ದು, 179 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಡಳಿತ ಸಂಸ್ಥೆ ತಿಳಿಸಿದೆ.

177 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಕಡಿಮೆ ಬೆಲೆಯ ಪೆಗಾಸಸ್ ಏರ್ ಲೈನ್ಸ್ ವಿಮಾನ ಪಶ್ಚಿಮ ಟರ್ಕಿಶ್ ನ  ಇಜ್ಮಿರ್ ನಿಂದ ಇಸ್ತಾಂಬುಲ್ ನ  ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ತುರ್ತು ಭೂ ಸ್ಪರ್ಶದಿಂದಾಗಿ ಈ ಘಟನೆ ನಡೆದಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com