ಅಮೆರಿಕಾದಲ್ಲಿ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ: ಅಲ್'ಖೈದಾ ಯೆಮನ್ ಮುಖ್ಯಸ್ಥ ಹತ್ಯೆ

ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೆರಿಕಾ ಸೇನಾಪಡೆ, ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಿದೆ. 
ಅಮೆರಿಕಾದಲ್ಲಿ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ: ಅಲ್'ಖೈದಾ ಯೆಮನ್ ಮುಖ್ಯಸ್ಥ ಹತ್ಯೆ
ಅಮೆರಿಕಾದಲ್ಲಿ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ: ಅಲ್'ಖೈದಾ ಯೆಮನ್ ಮುಖ್ಯಸ್ಥ ಹತ್ಯೆ

ವಾಷಿಂಗ್ಟನ್: ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಅಮೆರಿಕಾ ಸೇನಾಪಡೆ, ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಿದೆ. 

ಅಲ್ ಖೈದಾ ಮುಖ್ಯಸ್ಥನನ್ನು ಹತ್ಯೆ ಮಾಡಿರುವುದನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಚಿತಪಡಿಸಿದ್ದಾರೆ. 

ಅಮೆರಿಕಾದ ನೌಕಾ ನೆಲೆ ಮೇಲೆ ನಡೆದ ದಾಳಿ ಹೊಣೆಯನ್ನು ಅಲ್ ಖೈದಾ ಹೊತ್ತಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದೆ. 

ಅಮೆರಿಕಾದ ಯಮೆನ್ ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಸಂಘಟನೆಯ ಸಂಸ್ಥಾಪಕ ಮತ್ತು ನಾಯಕ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. 

ಫ್ಲೋರಿಡಾದಲ್ಲಿರುವ ಅಮೆರಿಕಾದ ನೌಕಾ ನೆಲೆಮೇಲೆ ಡಿಸೆಂಬರ್ 6 ರಂದು ದಾಳಿ ನಡೆದಿತ್ತು. ಈ ದಾಳಿಯ ಹೊಣೆಯನ್ನು ಅಲ್ ಕೈದಾ ಹೊತ್ತುಕೊಂಡಿತ್ತು. ದಾಳಿಯಲ್ಲಿ ವಾಯುದಳದ ಅಧಿಕಾರಿ ಸೇರಿ ಅಮೆರಿಕಾದ ಮೂವರು ನಾಯಕರನ್ನು ಹತ್ಯೆ ಮಾಡಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com