ಕೊರೋನಾ ವೈರಸ್: ವರದಿ ಮಾಡುತ್ತಿದ್ದ ಚೀನಿ ಪತ್ರಕರ್ತ ನಾಪತ್ತೆ, ರೊಚ್ಚಿಗೆದ್ದ ಜನತೆ

ಕೊರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವರದಿ ಮಾಡುತ್ತಿದ್ದ ಚೀನೀ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಪತ್ತೆಯಾದ ಪತ್ರಕರ್ತ ಚೆನ್ ಕ್ಯುಶಿ
ನಾಪತ್ತೆಯಾದ ಪತ್ರಕರ್ತ ಚೆನ್ ಕ್ಯುಶಿ

ಬೀಜಿಂಗ್: ಕೊರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವರದಿ ಮಾಡುತ್ತಿದ್ದ ಚೀನೀ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚೀನಾದಲ್ಲಿ ಕೊರೋನಾ ವೈರಸ್ ಸ್ಫೋಟಗೊಂಡ ಡಿಸೆಂಬರ್ 31ರಿಂದಲೂ ಸತತವಾಗಿ ಈ ಕುರಿತಂತೆ ಹುಬೈ ಪ್ರಾಂತ್ಯದಿಂದ ವರದಿ ಮಾಡುತ್ತಿದ್ದ ಪತ್ರಕರ್ತ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಚೆನ್ ಕ್ಯುಶಿ ಮತ್ತು ಫಾಂಗ್ ಬಿನ್ ಎಂಬ ಸ್ವತಂತ್ರ್ಯ ಪತ್ರಕರ್ತರು ಚೀನಾದ ಹುಬೈ ಪ್ರಾಂತ್ಯದಿಂದ ನೇರವಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ವರದಿ ಮಾಡುತ್ತಿದ್ದರು. ಇದೀಗ ಈ ಇಬ್ಬರ ಪೈಕಿ ಚೆನ್ ಕ್ಯುಶಿ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ಜಾರೆ. ಕಳೆದ ಶುಕ್ರವಾರ ವುಹಾನ್ ನಲ್ಲಿರುವ ಖಾಸಗಿ ಆಸ್ಪತ್ರೆಯ ಶವಾಗಾರದಿಂದ ಲೈವ್ ಮಾಡಿದ್ದ ಚೆನ್ ಕ್ಯುಶಿ ಆ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಚೆನ್ ಕ್ಯುಶಿ ಈ ಹಿಂದೆ ಕೊರೋನಾ ವೈರಸ್ ಪೀಡಿತ ಶವಗಳ ಅವೈಜ್ಞಾನಿಕ ವಿಲೇವಾರಿ ಕುರಿತು ವಿಡಿಯೋ ಮಾಡುತ್ತಿದ್ದಾಗ ಅಲ್ಲಿನ ಅಧಿಕಾರಿಗಳು ಈತನಿಗೆ ಎಚ್ಚರಿಕೆ ನೀಡಿದ್ದರು. ಅದನ್ನೂ ಮೀರಿ ಈತ ವಿಡಿಯೋ ಮಾಡಿದ್ದಾಗ ಅತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರಕರ್ತ ಚೆನ್ ಕ್ಯುಶಿ ಬಿಡುಗಡೆಗೆ ಚೀನಿ ಜನತೆ ಆಗ್ರಹಿಸಿದ್ದಾರೆ.     

ಇದೀಗ ಚೀನಾದಲ್ಲಿ ಚೆನ್ ಕ್ಯುಶಿ ನಾಪತ್ತೆ ಪ್ರಕರಣ ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಅಮೆರಿಕ ಮೂಲದ ಸಾಮಾಜಿಕ ಸಂಘಟನೆಗಳೂ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಸಂಘಟನೆಗಳು ಚೆನ್ ಕ್ಯುಶಿ ಪತ್ತೆಗೆ ಕಾರ್ಯಾಚರಣೆ ನಡೆಸುವುದಾಗಿ ಘೋಷಣೆ ಮಾಡಿವೆ. ಅಲ್ಲದೆ ಕೊರೋನಾ ವೈರಸ್ ಪೀಡಿತರಿಗೆ ಮತ್ತು ಅವರ ಸಂಬಂಧಿಕರಿಗೆ ಬೇಕಾದ ಸಲಹೆ ಮತ್ತು ಮಾರ್ಗದರ್ಶನ ಮಾಡುವುದಾಗಿ ಕೆಲ ಆನ್ ಲೈನ್ ಪ್ಲಾಟ್ ಫಾರ್ಮ್ ಗಳು ಮುಂದೆ ಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com