ಜಪಾನ್: ಪ್ರವಾಸಿ ಹಡಗಿನಲ್ಲಿದ್ದ 60 ಜನರಿಗೆ ಕೊರೋನಾವೈರಸ್, ಸೋಂಕಿತರ ಸಂಖ್ಯೆ 130ಕ್ಕೆ ಏರಿಕೆ

ಯೊಕೊಹಾಮಾ ಸಮೀಪ ಸಮುದ್ರದಲ್ಲೇ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಪ್ರವಾಸಿ ಹಡಗಿನಲ್ಲಿ (ಕ್ರೂಸ್) ಮತ್ತೆ ಹೆಚ್ಚುವರಿ 60ಕ್ಕೂ ಹೊಸ ಕೊರೋನವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸೋಂಕು ಪೀಡಿತ ಕ್ರೂಸ್ ಹಡಗು
ಸೋಂಕು ಪೀಡಿತ ಕ್ರೂಸ್ ಹಡಗು

ಟೋಕಿಯೊ: ಯೊಕೊಹಾಮಾ ಸಮೀಪ ಸಮುದ್ರದಲ್ಲೇ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಪ್ರವಾಸಿ ಹಡಗಿನಲ್ಲಿ (ಕ್ರೂಸ್) ಮತ್ತೆ ಹೆಚ್ಚುವರಿ 60ಕ್ಕೂ ಹೊಸ ಕೊರೋನವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇದರೊಂದಿಗೆ ಜಪಾನ್‌ನಲ್ಲಿ ಸದ್ಯ, ಡೈಮಂಡ್ ಪ್ರಿನ್ಸೆಸ್‌ ಕ್ರೂಸ್ ಹಡಗಿನಲ್ಲಿನ 130 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಕೊರೋನವೈರಸ್‌ ನ ಪ್ರಕರಣಗಳು ದೃಢಪಟ್ಟಿವೆ. ಹಾಂಕಾಂಗ್‌ನಲ್ಲಿ ಹಡಗಿನಿಂದ ಇಳಿದ ಪ್ರಯಾಣಿಕರೊಬ್ಬರಿಗೆ ನ್ಯುಮೋನಿಯಾ ಉಂಟುಮಾಡುವ ವೈರಸ್‌ ತಗುಲಿರುವುದು ಪತ್ತೆಯಾದ ನಂತರ ಹಡಗನ್ನು ಸಮುದ್ರದಲ್ಲೇ ನಿಲ್ಲಿಸಲಾಗಿದೆ ಎಂದು ಜಪಾನ್ ಟುಡೆ ವರದಿ ಮಾಡಿದೆ.

ಹಡಗಿನಲ್ಲಿ ನೈರ್ಮಲ್ಯ ನಿಯಂತ್ರಣದಲ್ಲಿ ಏನಾದರೂ ನೂನ್ಯತೆಗಳಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಡಗಿನಲ್ಲಿರುವ ವೃದ್ಧರನ್ನು ಪರೀಕ್ಷಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಜಪಾನ್ ವಿದೇಶಾಂಗ ಇಲಾಖೆ, ಕ್ರೂಸ್ ಷಿಪ್ ನಲ್ಲಿ ಪ್ರತ್ಯೇಕ ಕೊರೋನಾ ವೈರಸ್ ವೈದ್ಯಕೀಯ ವಿಭಾಗ ತೆರೆಯಲಾಗಿದ್ದು, ಇಲ್ಲಿ ವೈರಸ್ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಈ ವರೆಗೂ ತಮಗೆ ದೊರೆತಿರುವ ಮಾಹಿತಿಗಳ ಅನ್ವಯ ಹೆಚ್ಚುವರಿ 60 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ. ಸೋಂಕು ಪೀಡಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇತರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಈ ಐಶಾರಾಮಿ ಕ್ರೂಸ್ ಹಡಗಿನಲ್ಲಿ ಸುಮಾರು ಸಿಬ್ಬಂದಿಗಳೂ, ಪ್ರವಾಸಿಗರು, ಪ್ರಯಾಣಿಕರೂ ಸೇರಿ ಸುಮಾರು 3700 ಮಂದಿ ಇದ್ದು, ಈ ಪೈಕಿ 136 ಮಂದಿ ಭಾರತೀಯರೂ ಕೂಡ ಇದ್ದಾರೆ ಎನ್ನಲಾಗಿದೆ. ಆದರೆ ಪ್ರಸ್ತುತ ಸೋಂಕಿಗೆ ತುತ್ತಾಗಿರುವವರ ಪೈಕಿ ಭಾರತೀಯರಿದ್ದಾರೆಯೇ ಎಂಬ ವಿಚಾರದ ಕುರಿತು ಸ್ಪಷ್ಟನೆ ದೊರೆತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com