ಕೊರೋನಾವೈರಸ್‌ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 910ಕ್ಕೇರಿಕೆ: 40,000 ಪ್ರಕರಣ ಪತ್ತೆ

ಮಾರಕ ಕೊರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 910ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಕೂಡ 40 ಸಾವಿರ ಗಡಿದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಮಾರಕ ಕೊರೋನಾ ವೈರಸ್ ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 910ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಕೂಡ 40 ಸಾವಿರ ಗಡಿದಾಟಿದೆ.

ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ 3,062 ಹೊಸ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಈ ಸೋಂಕಿಗೆ ಒಳಗಾದವರ ಸಂಖ್ಯೆ 40,171 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 910ಕ್ಕೇರಿದ್ದು, ಒಂದೇ ದೇಶದಲ್ಲಿ ಒಂದೇ ದಿನ 97 ಸಾವು ಸಂಭವಿಸಿದೆ. 

ನೋವಲ್ ಕರೋನವೈರಸ್ ನ್ಯುಮೋನಿಯಾದಿಂದ ಸಾವನ್ನಪ್ಪಿದವರ ಸಂಖ್ಯೆ 910 ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಶನಿವಾರ ದೃಢಪಡಿಸಿದೆ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆಸ್ಪತ್ರೆಯಲ್ಲಿರುವವರಲ್ಲಿ, ಸುಮಾರು 6,500 ಜನರಲ್ಲಿ ತೀವ್ರ ತರವಾದ ಪ್ರಕರಣಗಳಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಚೀನಾದ ಹುಬೈ ಪ್ರಾಂತ್ಯದಲ್ಲಿ 2618 ಹೊಸ ಕೊರೊನಾ ಸೋಂಕು ಪ್ರಕರಣ
ಚೀನಾದ ಹುಬೈ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು 2618 ಹೊಸ ಪ್ರಕರಣಗಳಲ್ಲಿ ದೃಢಪಟ್ಟಿದ್ದು ಮತ್ತೆ 91 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ವುಹಾನ್ ನಲ್ಲಿ 1,921 ಹೊಸ ಸೋಂಕು ಪ್ರಕರಣಗಳು ಮತ್ತು ಇನ್ನೂ 73 ಸಾವು ಸಂಭವಿಸಿದೆ ಎಂದು ಹುಬೈ ಪ್ರಾಂತೀಯ ಆರೋಗ್ಯ ಆಯೋಗ ತಿಳಿಸಿದೆ. 356 ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದು ಅವರನ್ನು ಭಾನುವಾರ ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ. ಒಟ್ಟು 1795 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

ಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ
ಇನ್ನು ಹುಬೈ ಕೇಂದ್ರೀಯ ಪ್ರಾಂತ್ಯದ ಹೊರಗೆ ಮತ್ತು ಇಡೀ ಚೀನಾದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಮುಖವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ವಕ್ತಾರ ಮಿ ಫೆಂಗ್ ಭಾನುವಾರ ಹೇಳಿದ್ದಾರೆ. ಮಾರಕ ಸೋಂಕು ತಡೆದಗೆ ಸರ್ಕಾರ ತೆಗೆದುಕೊಂಡು ಮುನ್ನೆಚ್ಚರಿಕೆ ಮತ್ತು ನಿಯಂತ್ರಣಾ ಕಾರ್ಯವಿಧಾನಗಳು ಉತ್ತಮ ಫಲಿತಾಂಶ ತೋರಿವೆ ಎಂದು ಅವರು ಹೇಳಿದ್ದಾರೆ. ‘ದೇಶಾದ್ಯಂತ, ಹುಬೈ ಪ್ರಾಂತ್ಯವನ್ನು ಹೊರತುಪಡಿಸಿ, ದೃಢಪಟ್ಟ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಫೆ 3 (890 ಪ್ರಕರಣಗಳು)ರಿಂದ ಫೆ 8 ರವರೆಗೆ (509 ಪ್ರಕರಣಗಳು) ಶೇ 42.8ರಷ್ಟು ಕಡಿಮೆಯಾಗಿದೆ.’ ಮಿ ಫೆಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com