ಚೀನಾದಲ್ಲಿ ಅತ್ಯಂತ ಗಂಭೀರಗೊಂಡ ಕೊರೋನಾ ವೈರಸ್ ಹಾವಳಿ: ನಿತ್ಯ ಸಾವನ್ನಪ್ಪಿತ್ತಿರುವವರ ಸಂಖ್ಯೆ 100ಕ್ಕೆ ಏರಿಕೆ

ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕೆ ಗಂಭೀರವಾಗಿದೆ. ಈ ವೈರಾಣು ಪ್ರವೇಶದ ಸಂಭಾವ್ಯತೆ ಎದುರಿಸಲು ಎಲ್ಲಾ ದೇಶಗಳೂ ಸಜ್ಜಾರಿಗಬೇಕು. ಏಕೆಂದರೆ ಚೀನಾಕ್ಕೆ ಪ್ರಯಾಣ ಮಾಡಿಲ್ಲದವರಲ್ಲೂ ಈ ವೈರಸ್ ಕಂಡುಬಂದಿರುವ ಕಳವಳಕಾರಿ ನಿದರ್ಶನಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕೆ ಗಂಭೀರವಾಗಿದೆ. ಈ ವೈರಾಣು ಪ್ರವೇಶದ ಸಂಭಾವ್ಯತೆ ಎದುರಿಸಲು ಎಲ್ಲಾ ದೇಶಗಳೂ ಸಜ್ಜಾರಿಗಬೇಕು. ಏಕೆಂದರೆ ಚೀನಾಕ್ಕೆ ಪ್ರಯಾಣ ಮಾಡಿಲ್ಲದವರಲ್ಲೂ ಈ ವೈರಸ್ ಕಂಡುಬಂದಿರುವ ಕಳವಳಕಾರಿ ನಿದರ್ಶನಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. 

ಇದರ ಬೆನ್ನಲ್ಲ, ಚೀನಾದಲ್ಲಿ ಕಂಡುಬಂದಿರುವ ಕೊರೋನಾ ವೈರಸ್ ಎಂಬುದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾಗೂ ಸಂಭಾವ್ಯ ಅಪಾಯ ಎಂದು ಸಾರಿರುವ ಬ್ರಿಟನ್ ಸರ್ಕಾರ, ವೈರಸ್ ಸೋಂಕಿತರನ್ನು ಬಲವಂತಾಗಿ ವಶಕ್ಕೆ ಪಡೆಯಲಾಗುವುದು. ಮುಕ್ತವಾಗಿ ಓಡಾಡಲು ಬಿಡುವುದಿಲ್ಲ ಎಂದು ಪ್ರಕಟಿಸಿದೆ. 

ಮತ್ತೊಂದೆಡೆ, ವೈರಸ್'ನ ಕೇಂದ್ರ ಬಿಂದುವಾಗಿರುವ ಚೀನಾದಲ್ಲಿ ಮತ್ತೆ 100 ಮಂದಿ ಸಾವಿಗೀಡಾಗಿದ್ದು, ಇದರಿಂದಾಗಿ ಸಾವಿನ ಸಂಖ್ಯೆ 1000ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಕೊರೋನಾ ವೈರಸ್ ವ್ಯಾಪಿಸುವಿಕೆ  ಪ್ರಮಾಣ ಸ್ಥಿರವಾಗುತ್ತಿದೆ. ಹೊಸದಾಗಿ ಬೆಳಕಿಗೆ ಬರುವ ಪ್ರಕಱಣಗಳ ಸಂಖ್ಯೆ ಕುಸಿಯಲು ಆರಂಭಿಸಿದೆ ಎಂದು ಚೀನಾ ಅಧಿಕಾರಿಘಲು ತಿಳಿಸಿದ್ದಾರೆ. 

ಕೊರೋನಾ ವೈರಸ್ ಮರಣ ಮೃದಂಗಬಾರಿಸುತ್ತಿರುವ ಹಿನ್ನೆಲೆಯಲ್ಲಿ ಟ್ವೀಟರ್ ಮೂಲಕ ಪ್ರತಿಕ್ರಿಯಿಸಿರುವ ಡಬ್ಲ್ಯೂಹೆಚ್ಒ ಮುಖ್ಯಸ್ಥ ಡೆಟ್ರೋಸ್ ಅದಾನೊಮ್ ಘಬ್ರೆಯೆಸುಸ್, ಚೀನಾಕ್ಕೆ ಪ್ರಯಾಣ ಮಾಡಿದ ಇತಿಹಾಸವೇ ಇಲ್ಲದ ವ್ಯಕ್ತಿಗಳಲ್ಲೂ ಕೊರೋನಾ ವೈರಸ್ ಪತ್ತೆಯಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಈ ಪ್ರಕರಣಗಳು ಪತ್ತೆಯಾಗುತ್ತಿರುವುದನ್ನು ನೋಡಿದರೆ, ವಿವಿಧ ದೇಶಗಳಿಗೆ ವೈರಾಣು ಭಾರೀ ಪ್ರಮಾಣದಲ್ಲಿ ಹಬ್ಬಿರುವ ಸುಳಿವು ಲಭಿಸುತ್ತಿದೆ. ಇದನ್ನು ಗಮನಿಸಿದರೆ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಕೊರೋನಾ ವೈರಸ್ ಉಪಟಳ ತೀವ್ರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com