ಉಗ್ರರಿಗೆ ಆರ್ಥಿಕ ನೆರವು: ಹಫೀಜ್ ಸಯೀದ್ ಗೆ 11 ವರ್ಷಗಳ ಜೈಲು ಶಿಕ್ಷೆ 

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನ ಭಯೋತ್ಪಾನೆ ನಿಗ್ರಹ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 
ಉಗ್ರರಿಗೆ ಆರ್ಥಿಕ ನೆರವು: ಹಫೀಜ್ ಸಯೀದ್ ಗೆ 11 ವರ್ಷಗಳ ಜೈಲು ಶಿಕ್ಷೆ 

ಲಾಹೋರ್: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನ ಭಯೋತ್ಪಾನೆ ನಿಗ್ರಹ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಎರಡು ಪ್ರಕರಣದಲ್ಲಿ  ಹಫೀಜ್ ಸಯೀದ್ ಗೆ ತಲಾ 5ವರೆ ವರ್ಷಗಳ ಶಿಕ್ಷೆ ವಿಧಿಸಲಾಗಿದೆ

ಡಿ.11 ರಂದು ಹಫೀಜ್ ಸಯೀದ್ ಹಾಗೂ ಸಹಚರರ ವಿರುದ್ಧದ ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಸಲಾಗಿತ್ತು. ಈ ಬಳಿಕ ಕೋರ್ಟ್ ಪ್ರತಿ ದಿನವೂ ವಿಚಾರಣೆ ನಡೆಸಿದ್ದು ತೀರ್ಪು ಪ್ರಕಟಿಸಿದೆ. 5 ವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ ಪ್ರಕರಣದ ಅಪರಾಧಿಗಳಿಗೆ ತಲಾ 15,000 ರೂ ದಂಡ ವಿಧಿಸಿದೆ. 

ಇನ್ನೂ ನಾಲ್ಕು ಪ್ರಕರಣಗಳು ಸಯೀದ್ ವಿರುದ್ಧ ಇದ್ದು, ವಿಚಾರಣೆ ಅಂತ್ಯಗೊಳ್ಳುವವರೆಗೂ ಈಗಾಗಲೇ ವಿಚಾರಣೆ ಮುಕ್ತಾಯಗೊಂಡಿರುವ 2 ಪ್ರಕರಣಗಳ ತೀರ್ಪನ್ನು ವಿಳಂಬವಾಗಿ ಪ್ರಕಟಿಸಲು ಹಫೀಜ್ ಸಯೀದ್ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ನ್ಯಾಯಾಲಯ ಅಂಗೀಕರಿಸಿತ್ತು. 

ಸಯೀದ್, ಜಾಫರ್ ಇಕ್ಬಾಲ್, ಯಾಹ್ಯಾ ಅಜೀಜ್, ಅಬ್ದುಲ್ ರೆಹಮಾನ್ ಮಕ್ಕಿ ವಿರುದ್ಧದ ಇನ್ನೂ ನಾಲ್ಕು ಪ್ರಕರಣಗಳು ಭಯೋತ್ಪಾದನ ನಿಗ್ರಹ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com