ಮಹಾಮಾರಿ ಕೊರೋನಾವೈರಸ್ ಹೊಸ ಹೆಸರು ಕೋವಿಡ್-19

ಚೀನಾದಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಹಾಮಾರಿ ಕೊರೋನಾ ವೈರಸ್'ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಒಂದೇ ದಿನ 108 ಮಂದಿಯನ್ನು ಬಲಿ ಪಡೆದ ಮಾರಕ ವೈರಸ್: ಸೋಂಕು ಪೀಡಿತರ ಸಂಖ್ಯೆ 42,638ಕ್ಕೆ ಏರಿಕೆ

ವಾಷಿಂಗ್ಟನ್: ಚೀನಾದಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಹಾಮಾರಿ ಕೊರೋನಾ ವೈರಸ್'ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. 

ಕೋವಿಡ್-19 ಎಂಬುದು ಸಿಒ-ಕೊರೋನಾ, ವಿ-ವೈರಸ್ ಹಾಗೂ ಡಿ-ಡಿಸೀಸ್ (ಕೊರೋನಾ ವೈರಸ್ ರೋಗ). ಇದು 2019ರ ಡಿಸೆಂಬರ್ 31 ರಂದು ಪತ್ತೆಯಾದ ಕಾರಣ 19 ಎಂದು ಸೇರಿಸಲಾಗಿದೆ. 

ಈ ನಡುವೆ ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಮತ್ತಷ್ಟು ವ್ಯಾಪಿಸಿದ್ದು, ಸೋಮವಾರ ಒಂದೇ ದಿನ 108 ಮಂದಿಯನ್ನು ಬಲಿಪಡೆದುಕೊಂಡಿದೆ ಈ ಮೂಲಕ ಸಾವಿನ ಸಂಖ್ಯೆ 1,000ಕ್ಕೆ ಏರಿಕೆ. ಅಲ್ಲದೆ, ಕೊರೋನಾ ವೈರಸ್ ಇರುವುದು ದೃಢಪಟ್ಟವರ ಸಂಖ್ಯೆ 42,638ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡವೊಂದು ಚೀನಾಕ್ಕೆ ಆಗಮಿಸಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ. 

ಕೊರೋನಾ ವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿರುವುದಾಗಿ ಬ್ರಿಟೀಷ್ ವಿಜ್ಞಾನಿಗಳ ತಂಡವೊಂದು ಹೇಳಿಕೊಂಡಿದ್ದು, ಶ್ವಾಸಕೋಶದ ತೊಂದರೆಯನ್ನುಂಟು ಮಾಡುವ ವೈರಾಣು ರೋಗಗಳಿಗೆ ಔಷಧಿ ಕಂಡು ಹಿಡಿದಿದ್ದಾರೆಂದು ತಿಳಿದುಬಂದಿದೆ. ಈ ವರ್ಷಾಂತ್ಯಕ್ಕೆ ಯಶಸ್ವಿಯಾಗಿ ಪ್ರಯೋಗ ಹಂತಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದೇವೆಂದು ಲಂಡನ್ ನ ಇಂಪೀರಿಯಲ್ ಕಾಲೇಜಿನ ಸಂಶೋಧರು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com