ಕೊರೋನಾವೈರಸ್ ಭೀತಿ: ಸಾವಿನ ಸಂಖ್ಯೆ 1,355ಕ್ಕೆ ಏರಿಕೆ

ಚೀನಾ ರಾಷ್ಚ್ರದಲ್ಲಿ ಮರಣ ಮೃದಂಗವನ್ನು ಮತ್ತಷ್ಟು ಹೆಚ್ಚಿಸಿರುವ ಮಹಾಮಾರಿ ಕೊರೋನಾ ವೈರಸ್, 1,355 ಮಂದಿಯನ್ನು ಬಲಿಪಡೆದುಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾ ರಾಷ್ಚ್ರದಲ್ಲಿ ಮರಣ ಮೃದಂಗವನ್ನು ಮತ್ತಷ್ಟು ಹೆಚ್ಚಿಸಿರುವ ಮಹಾಮಾರಿ ಕೊರೋನಾ ವೈರಸ್, 1,355 ಮಂದಿಯನ್ನು ಬಲಿಪಡೆದುಕೊಂಡಿದೆ. 

ಕೊರೋನಾವೈರಸ್ ಪರಿಣಾಮ ದಿನದಿಂದ ದಿನಕ್ಕೆ ಸಾವಿನ್ನಪ್ಪುತ್ತಿರುವವರ ಹಾಗೂ ಸೋಂಕು ತಗುಲಿತ್ತಿರುವವ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಊಹಾಪೋಹಗಳು ಹಾಗೂ ಭೀತಿ ಹೆಚ್ಚಾಗುವ ಕಾರಣ ಚೀನಾ ಇದೀಗ ಸೋಂಕು ಪೀಡಿತರ ಸಂಖ್ಯೆ ಎಣಿಸುವ ವಿಧಾನವನ್ನು ಬದಲಿಸಿದೆ ಎಂದು ವರದಿಗಳು ತಿಳಿಸಿವೆ. 

ವೈರಸ್ ನಿಂದಾಗಿ ಹುಬೆ ಒಂದೇ ಪ್ರಾಂತ್ಯದಲ್ಲಿ ನಿನ್ನೆ 242 ಮಂದಿ ಸಾವನ್ನಪ್ಪಿದ್ದು, 145,840 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಸಾವಿನ ಸಂಖ್ಯೆ 1,355ಕ್ಕೆ ಏರಿಕೆಯಾಗಿದ್ದು, ಈವರೆಗೂ ಸೋಂಕು ಪೀಡಿತರ ಸಂಖ್ಯೆ 60,000ಕ್ಕೆ ಏರಿಕೆಯಾಗಿದೆ. 

ಈ ನಡುವೆ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚೀನಾದ ಕಮ್ಯುನಿಸ್ಟ್ ಪಕ್ಷದ ಮಹಾಸಭೆಯನ್ನೇ ರದ್ದು ಮಾಡುವ ಸಾಧ್ಯತೆಗಳು ಕಂಡು ಬರುತ್ತಿವೆ. 

ಮುಂದಿನ ತಿಂಗಳು ಸಭೆ ನಡೆಯಬೇಕಿದ್ದು, ಇದರಲ್ಲಿ 3000ಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸಬೇಕಿತ್ತು. ಆದರೆ, ಪ್ರಸಕ್ತ ಕ್ಸಿಜಿನ್ ಪಿಂಗ್ ನೇತೃತ್ವದ ಆಡಳಿತ ಕೊರೋನಾ ವೈರಸ್ ನಿರ್ವಹಿಸುವ ರೀತಿ ಭಾರೀ ಟೀಕೆಗೆ ಗುರಿಯಾಗಿದೆ. 

ಚೀನಾದಲ್ಲಿ ಇದೂವರೆಗೆ ಯಾವುದೇ ಕಮ್ಯುನಿಸ್ಟ್ ನಾಯಕ ಹೊಂದದ ಸರ್ವಾಧಿಕಾರದ ರೀತಿಯಲ್ಲಿ ಅಧಿಕಾರ ಪಡೆದುಕೊಂಡಿರುವ ಕ್ಸಿ ಜಿನ್ ಪಿಂಗ್ ಇಡೀ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. 2002-03ರಲ್ಲಿ ಸಾರ್ಸ್ ಸೋಂಕಿನ ಕುರಿತು ಜನರಿಗೆ ಮಾಹಿತಿ ನೀಡದೇ ಮಾಡಿದ ರೀತಿಯಲ್ಲೇ ಈಗಲೂ ಸರ್ಕಾರ ಮಾಹಿತಿ ಮುಚ್ಚಿಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಕ್ಸಿ ವಿರುದ್ಧದ ಟೀಕೆ ಸ್ವಪಕ್ಷದಲ್ಲಿಯೇ ಇರುವ ವಿರೋಧಿ ಬಣದ ನಾಯಕರಿಗೆ ಹೊಸ ಅಸ್ತ್ರ ನೀಡಿದೆ. ಹೀಗಾಗಿ ಇದು ಕ್ಸಿಪಟ್ಟಕ್ಕೆ ಕುತ್ತು ತರುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com