ಟ್ರಂಪ್ ಭಾರತ ಭೇಟಿ ವೇಳೆ ಉಭಯ ದೇಶಗಳಿಗೂ ಪ್ರಯೋಜನಕಾರಿ ಒಪ್ಪಂದಗಳು: ತಜ್ಞರ ನಿರೀಕ್ಷೆ

ಈ ತಿಂಗಳ ಕೊನೆವಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದು, ಉಭಯ ದೇಶಗಳಿಗೂ ಪ್ರಯೋಜನಕಾರಿಯಾಗುವಂತಹ ಒಪ್ಪಂದವೇರ್ಪಡುವ ಸಾಧ್ಯತೆಗಳಿಗೆ ಎಂದು ಅಮೆರಿಕಾ- ಭಾರತ ತಜ್ಞರು ನಿರೀಕ್ಷಿಸುತ್ತಿದ್ದಾರೆ.
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್:  ಈ ತಿಂಗಳ ಕೊನೆವಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದು, ಉಭಯ ದೇಶಗಳಿಗೂ ಪ್ರಯೋಜನಕಾರಿಯಾಗುವಂತಹ ಒಪ್ಪಂದವೇರ್ಪಡುವ ಸಾಧ್ಯತೆಗಳಿವೆ ಎಂದು ಅಮೆರಿಕಾ- ಭಾರತ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಫೆಬ್ರವರಿ 24- 25 ರಂದು  ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.ಸೂಕ್ತ ರೀತಿಯಲ್ಲಿ  ಒಪ್ಪಂದ ವೇರ್ಪಟ್ಟಲ್ಲಿ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಟ್ರಂಪ್  ಸುದ್ದಿಗಾರರಿಗೆ ಈ ವಾರ ತಿಳಿಸಿದ್ದರು.

ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಕುತೂಲಹದಿಂದ ಎದುರು ನೋಡುತ್ತಿದ್ದು, ಸುಂಕದ ವಿಚಾರ ಹಾಗೂ ಕೆಲ ವಸ್ತುಗಳ ದರ ಸಮಸ್ಯೆ ಪರಿಹಾರವಾಗಿ ಉತ್ತಮ ಸುಧಾರಣೆಯಾಗುವ ಸಾಧ್ಯತೆ ಇದೆ. ಆದರೆ, ಪರಿವರ್ತನೆಯ ಕ್ಷಣವಾಗಿರುವುದಿಲ್ಲ ಎಂದು ಭಾರತ- ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾ ವಿದೇಶಾಂಗ ವ್ಯವಹಾರಗಳ ಮೇಲಿನ ಸಮಿತಿಯ  ಹಿರಿಯ ಅಧಿಕಾರಿ ಅಲಿಸಾ ಐರೆಸ್ ಹೇಳಿದ್ದಾರೆ.

ಐರೆಸ್ 2010ರಿಂದ 2013ರವೆರಗೂ ದಕ್ಷಿಣ ಏಷ್ಯಾ  ಉಪ ಸಹಾಯಕ ಸೆಕ್ರಟರಿ ಆಫ್ ಸ್ಟೇಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. 'ಅವರ್ ಟೈಮ್ ಹ್ಯಾಸ್ ಕಮ್ ' ಕೃತಿಯ ಲೇಖಕರಾಗಿದ್ದಾರೆ.

ವ್ಯಾಪಾರ ಒಪ್ಪಂದದಿಂದ ಉಭಯ ದೇಶಗಳ ನಡುವೆ ಗೆಲುವಾಗಲಿದೆ ಎಂದು  ಅಬ್ಸರ್ವರ್ ರಿಸರ್ಚ್ ಪೌಂಢೇಷನ್ ಸಿನಿಯರ್ ಫೆಲೋ ಭಾರತ್ ಗೋಪಾಲಸ್ವಾಮಿ ಹೇಳಿದ್ದಾರೆ.

ಓಪನ್ ಇಂಡೋ- ಫೆಸಿಪಿಕ್ ಕಾರ್ಯತಂತ್ರ ಮತ್ತು ಅಮೆರಿಕಾದ ಮುಕ್ತ ನೀತಿ ಅನುಷ್ಠಾನ, ಅಮೆರಿಕಾ- ಇರಾನ್ ಸಂಬಂಧ ಹದಗೆಟ್ಟಿರುವುದು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. 

ಅಮೆರಿಕಾ - ಭಾರತ ಆರ್ಥಿಕ ಸಂಬಂಧ ಹಲವು ವರ್ಷಗಳಿಂದ ಸವಾಲಿನಿಂದ ಕೂಡಿದ್ದು, ಪರಿಹರ ಕಷ್ಟಸಾಧ್ಯ ಆದಾಗ್ಯೂ, ಅಮೆರಿಕಾ ಮತ್ತು ಭಾರತ ಸರ್ಕಾರ ಮಾತುಕತೆ ಕ್ರಮಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದೆಂದು ಐರಿಸ್ ಹೇಳಿದ್ದಾರೆ. 

ಅಮೆರಿಕಾ ದೇಶಿಯ ಮಾರ್ಕೆಟ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕಾಗುತ್ತದೆ. ಅಂತೆಯೇ  ಪ್ರತಿಭಾವಂತ  ವಲಸೆಗಾರರಿಗಾಗಿ  ಭಾರತ ಅಮೆರಿಕಾದಿಂದ ಹೆಚ್ಚಿನ ವ್ಯಾಪಾರ ಹಾಗೂ ಹೂಡಿಕೆಯನ್ನು ಮಾಡಬೇಕಾಗುತ್ತದೆ ಎಂದು ಇಂಟರ್ ನ್ಯಾಷನಲ್ ರಿಪಬ್ಲಿಕನ್ ಇನ್ಸಿಟಿಟ್ಯೂನ್ ಅಧ್ಯಕ್ಷ ಡೇನಿಯಲ್ ಟ್ವಿನಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೇರಾದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದವರೆಗೂ ಲಕ್ಷಾಂತರ ಜನರನ್ನು ನೋಡುವ ನಿರೀಕ್ಷೆ ಹೊಂದಿದ್ದೇನೆ ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ್ದಾರೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಡೊನಾಲ್ಡ್ ಟ್ರೇಪ್  ಜನತೆಯನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com