ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ನೇಮಕ

ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಇನ್ಫೋಸಿಸ್‌ ಸಹ - ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರನ್ನು ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಗುರುವಾರ ನೇಮಕ ಮಾಡಿದ್ದಾರೆ.
ರಿಷಿ ಸುನಕ್
ರಿಷಿ ಸುನಕ್

ಲಂಡನ್‌: ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಇನ್ಫೋಸಿಸ್‌ ಸಹ - ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರನ್ನು ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಗುರುವಾರ ನೇಮಕ ಮಾಡಿದ್ದಾರೆ.

ಅಚ್ಚರಿಯ ಬೆಳೆವಣಿಗೆಯಲ್ಲಿ ಹಾಲಿ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್‌ ಜಾವಿದ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ರಿಷಿ ಸುನಕ್‌ ಅವರನ್ನು ಜಾನ್ಸನ್‌ ನೇಮಕ ಮಾಡಿದ್ದಾರೆ.

2015ರಲ್ಲಿ ಬ್ರಿಟನ್‌ ಸಂಸತ್‌ಗೆ ಆಯ್ಕೆಯಾಗಿದ್ದ ರಿಷಿ ಈ ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಇದು ಹಣಕಾಸು ಸಚಿವರ ನಂತರದ ಪ್ರಮುಖ ಸ್ಥಾನವಾಗಿದೆ.

ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್‌, ಆಕ್ಸ್‌ಫರ್ಡ್‌ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್‌ ವಿವಿಯಿಂದ ಎಂಬಿಎ ಪದವಿಯನ್ನೂ ಅವರು ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com