ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ: ರೊಚ್ಚಿಗೆದ್ದ ಭಕ್ತಾದಿಗಳು! 

ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ ನಡೆಸಿ, ಪೋಸ್ಟ್ ಮಾಡಿರುವ ಜನಪ್ರಿಯ ಇಟ್ಯಾಲಿಯನ್ ಜೋಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
 

Published: 14th February 2020 05:06 PM  |   Last Updated: 14th February 2020 05:06 PM   |  A+A-


Outrage in Myanmar as tourists shoot porn video at holy Buddhist site

ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ: ರೊಚ್ಚಿಗೆದ್ದ ಭಕ್ತಾದಿಗಳು!

Posted By : Srinivas Rao BV
Source : The New Indian Express

ಯಾಂಗೊನ್: ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ ನಡೆಸಿ, ಪೋಸ್ಟ್ ಮಾಡಿರುವ ಜನಪ್ರಿಯ ಇಟ್ಯಾಲಿಯನ್ ಜೋಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
 
11 ತಿಂಗಳಿನ ಹಿಂದಷ್ಟೇ ಈ 23 ವರ್ಷದ ಇಟ್ಯಾಲಿಯನ್ ಜೋಡಿ (YeeesYeeesYeees) ಪೋರ್ನ್ ಹಬ್ ನಲ್ಲಿ ಸಕ್ರಿಯರಾಗಿದ್ದು, ಮಯನ್ಮಾರ್ ನ ವಿಶ್ವಪಾರಂಪರಿಕ ತಾಣ, ಜನಪ್ರಿಒಯ ಪ್ರವಾಸಿ ತಾಣವಾಗಿರುವ ಬೌದ್ಧ ಪಗೋಡಾದ ಬಳಿ ಪೋರ್ನ್ ಚಿತ್ರೀಕರಣ ನಡೆಸಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾರೆ.
 
ಈ ಜೋಡಿಗೆ ಪೋರ್ನ್ ಹಬ್ ನಲ್ಲಿ 81,000 ಚಂದಾದಾರರಿದ್ದು, 11 ತಿಂಗಳಿನಿಂದ 35 ಮಿಲಿಯನ್ ವಿಡಿಯೋ ವೀಕ್ಷಕರಿದ್ದಾರೆ. ಈಗ ಈ ಜೋಡಿ ಮಯನ್ಮಾರ್ ನ ಬೌದ್ಧ ಪಗೋಡಾದ ಬಳಿ ಚಿತ್ರೀಕರಣ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿರುವ ವಿಡಿಯೋಗೆ ಮಯನ್ಮಾರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ನ್ಯೂ ಫೆಂಟಾಸ್ಟಿಕ್ ಏಷ್ಯಾ ಟೂರ್  ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾರಂಪರಿಕ ತಾಣದಲ್ಲಿನ ಭದ್ರತೆಯ ಕುರಿತು ಪ್ರಶ್ನಿಸಿದ್ದಾರೆ. ಮಯನ್ಮಾರ್ ನ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp