ದಯವಿಟ್ಟು ನಿಮ್ಮ ಹಣ ತೆಗೆದುಕೊಳ್ಳಿ: ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಅಲವತ್ತು

ನನಗೆ ನಿಮ್ಮ ಹಣ ಬೇಡ ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದು ನನ್ನ ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು, ಪ್ರಮಾದ ಎಸಗಿಲ್ಲ ಬ್ಯಾಂಕ್ ಗಳೇ, ನಿಮಗೆ ಕೊಡಬೇಕಿರುವ, ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಬೆಂಗಳೂರು ಮೂಲದ ಮದ್ಯ ಉದ್ಯಮಿ ವಿಜಯ್ ಮಲ್ಯ ಅಲವತ್ತುಕೊಂಡಿದ್ದಾರೆ. 

Published: 14th February 2020 12:47 PM  |   Last Updated: 14th February 2020 01:41 PM   |  A+A-


Posted By : Sumana Upadhyaya
Source : UNI

ಲಂಡನ್: ನನಗೆ ನಿಮ್ಮ ಹಣ ಬೇಡ ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದು ನನ್ನ ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು, ಪ್ರಮಾದ ಎಸಗಿಲ್ಲ ಬ್ಯಾಂಕ್ ಗಳೇ, ನಿಮಗೆ ಕೊಡಬೇಕಿರುವ, ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಬೆಂಗಳೂರು ಮೂಲದ ಮದ್ಯ ಉದ್ಯಮಿ ವಿಜಯ್ ಮಲ್ಯ ಅಲವತ್ತುಕೊಂಡಿದ್ದಾರೆ. 


ಭಾರತಕ್ಕೆ ಗಡೀಪಾರು ಮಾಡುವ ಆದೇಶದ ವಿರುದ್ಧ ಬ್ರಿಟನ್ ಹೈಕೋರ್ಟ್ ನಲ್ಲಿ ಸಲ್ಲಿಸಿದ ಮೇಲ್ಮನವಿಯ ಮೂರು ದಿನಗಳ ವಿಚಾರಣೆಯ ನಂತರ ಈ ಕೋರಿಕೆ ಮುಂದಿಟ್ಟಿದ್ದಾರೆ. 


ಬ್ಯಾಂಕ್ ಗಳಿಂದ ಪಡೆದ 9 ಸಾವಿರ ಕೋಟಿ ರೂಪಾಯಿ ವಾಪಾಸು ಮಾಡದೇ ವಂಚಿಸಿದ ಆರೋಪ ಎದುರಿಸುತ್ತಿರುವ ಕಿಂಗ್ ಫಿಶರ್ಸ್ ಸಮೂಹದ ಮುಖ್ಯಸ್ಥ, "ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒಂದೇ ಆಸ್ತಿಗಾಗಿ ಜಗಳವಾಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ನನ್ನನ್ನು ವಿವೇಚನಾಯುಕ್ತವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆಪಾದಿಸುತ್ತಿದ್ದಾರೆ. 


ಬ್ಯಾಂಕುಗಳು ನೀಡಿದ ಸಾಲದ ಹಣವನ್ನು ವಾಪಾಸು ತೆಗೆದುಕೊಳ್ಳುವಂತೆ ನಾನು ಕೈಮುಗಿದು ಮನವಿ ಮಾಡುತ್ತೇನೆ ಎಂದು ಲಂಡನ್ ನಲ್ಲಿರುವ ರಾಯಲ್ ಕೋರ್ಟ್ ಆಫ್ ಜೆಸ್ಟೀಸ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದರು. 


ನಾನು ಹಣ ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕ್ ಗಳ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ ಇಡಿ ಸ್ವಯಂಪ್ರೇರಿತವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು, ಅಪರಾಧ ಮಾಡಿಲ್ಲ ಎಂದು ಮಲ್ಯ ಸಮರ್ಥಿಸಿಕೊಳ್ಳುತ್ತಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp