ಕೊರೋನಾ ವೈರಸ್ ಮರಣ ಮೃದಂಗ: ಚೀನಾದಲ್ಲಿ ಮೃತರ ಸಂಖ್ಯೆ 1500ಕ್ಕೆ ಏರಿಕೆ 

ಚೀನಾದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟರ ಸಂಖ್ಯೆ 1523ಕ್ಕೆ ಏರಿಕೆ ಆಗಿದೆ. ಈ ಸೋಂಕು ಹೆಚ್ಚಾಗಿರುವ ಹುಬೈ ಪ್ರಾಂತ್ಯದಲ್ಲಿ 143 ಹೊಸ ಸಾವು ಪ್ರಕರಣಗಳು ವರದಿಯಾಗಿದ್ದು, ದೃಢಪಡಿಸಿದ ಪ್ರಕರಣಗಳು 66 ಸಾವಿರಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ

Published: 15th February 2020 09:30 AM  |   Last Updated: 15th February 2020 09:30 AM   |  A+A-


CasualImages1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ಬೀಜಿಂಗ್ : ಚೀನಾದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟರ ಸಂಖ್ಯೆ 1523ಕ್ಕೆ ಏರಿಕೆ ಆಗಿದೆ. ಈ ಸೋಂಕು ಹೆಚ್ಚಾಗಿರುವ ಹುಬೈ ಪ್ರಾಂತ್ಯದಲ್ಲಿ 143 ಹೊಸ ಸಾವು ಪ್ರಕರಣಗಳು ವರದಿಯಾಗಿದ್ದು, ದೃಢಪಡಿಸಿದ ಪ್ರಕರಣಗಳು 66 ಸಾವಿರಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ

ಕೊರೋನಾ ವೈರಸ್ ಸೋಂಕು ಹೊಸದಾಗಿ 2641 ಮಂದಿಯಲ್ಲಿ ತಗುಲಿರುವುದು ದೃಢಪಟ್ಟಿದೆ. 31 ಪ್ರಾಂತೀಯ ಮಟ್ಟದ ಪ್ರದೇಶಗಳು ಮತ್ತು ಕ್ಸಿನ್‌ಜಿಯಾಂಗ್ ಉತ್ಪಾದನೆ ಮತ್ತು ನಿರ್ಮಾಣ ಕಾರ್ಪ್ಸ್ ನಲ್ಲಿ ಶುಕ್ರವಾರ 143 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾ ಆರೋಗ್ಯ ಆರೋಗ್ಯ ಹೇಳಿದೆ.

ಮೃತರ ಪೈಕಿ 139 ಮಂದಿ ಹುಬೈ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಇಬ್ಬರು ಹೆನಾನ್ ,  ಒಬ್ಬರು ಬೀಜಿಂಗ್ ಹಾಗೂ ಚಾಂಗ್ ಕಿಂಗ್ ನಲ್ಲಿ ಸೇರಿದವರಾಗಿದ್ದಾರೆ ಅಲ್ಲದೇ 2, 277 ಹೊಸ ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಆಯೋಗ ತಿಳಿಸಿದೆ. 

ಶುಕ್ರವಾರ 849 ರೋಗಿಗಳು ಗಂಭೀರವಾಗಿ ಕಾಯಿಲೆಗೆ ತುತ್ತಾಗಿದ್ದರೆ 1, 373 ಜನರು ಆಸ್ಪತ್ರೆಯಿಂದ ಡಿಸ್ಚಾರ್ಟ್ ಆಗಿದ್ದಾರೆ ಎಂದು ರಾಜ್ಯ ನಿರ್ವಹಣೆಯ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿಯಾಗಿದೆ.  

513, 183 ಮಂದಿ ಸಂಪರ್ಕದಲ್ಲಿದ್ದು, 30, 081 ಮಂದಿಯನ್ನು ವೈದ್ಯಕೀಯ ಅಬ್ಸರ್ವೆಷನ್ ನಿಂದ ಶುಕ್ರವಾರ ಬಿಡುಗಡೆ ಮಾಡಲಾಗಿದೆ. 169, 039 ಮಂದಿ ಈಗಲೂ ವೈದ್ಯಕೀಯ ಅಬ್ಸರ್ವೆಷನ್ ನಲ್ಲಿದ್ದಾರೆ ಎಂದು ಆಯೋಗ ತಿಳಿಸಿದೆ. 

ಏತನ್ಮಧ್ಯೆ, ಸಾಂಕ್ರಾಮಿಕ ಮೇಲ್ವಿಚಾರಣೆ ಮತ್ತು ವಿಶ್ಲೇಷಣೆ, ವೈರಸ್ ಪತ್ತೆಹಚ್ಚುವಿಕೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಮತ್ತು ಸಂಪನ್ಮೂಲ ಹಂಚಿಕೆಯನ್ನು ಉತ್ತಮವಾಗಿ ಬೆಂಬಲಿಸಲು ದೊಡ್ಡ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ಡಿಜಿಟಲ್ ತಂತ್ರಜ್ಞಾನವನ್ನು ಬಳಸಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp