ಉತ್ತರ ಆಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬನ್ ದಾಳಿ: 11 ಮಂದಿ ಸೈನಿಕರು ಸಾವು

ಉತ್ತರ ಕುಂಡುಜ್ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ ಆಫ್ಘಾನಿಸ್ತಾನ ಸೇನೆಯ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯ ಪರಿಣಾಮವಾಗಿ ಒಟ್ಟು 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ಸೋಮವಾರ ಸ್ಪುಟ್ನಿಕ್ ಗೆ ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಉತ್ತರ ಕುಂಡುಜ್ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ ಆಫ್ಘಾನಿಸ್ತಾನ ಸೇನೆಯ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ದಾಳಿಯ ಪರಿಣಾಮವಾಗಿ ಒಟ್ಟು 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ಸೋಮವಾರ ಸ್ಪುಟ್ನಿಕ್ ಗೆ ತಿಳಿಸಿವೆ.

‘ತಾಲಿಬಾನ್ ಉಗ್ರರು ಭಾನುವಾರ ರಾತ್ರಿ ನಡೆಸಿದ ಆಫ್ಘಾನಿಸ್ತಾನ ರಾಷ್ಟ್ರೀಯ ಸೇನಾ ನೆಲೆ ಮೇಲೆ ನಡೆಸಿದ ದಾಳಿಯಲ್ಲಿ 11 ಸೈನಿಕರು ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ, ಸೇನಾ ನೆಲೆ ಧ್ವಂಸಗೊಂಡಿದೆ.’ ಎಂದು ಮೂಲಗಳು ತಿಳಿಸಿವೆ. ದಾಳಿಯ ಹೊಣೆಯನ್ನು ತಾಲಿಬಾನ್ ಸಂಘಟನೆ ಹೊತ್ತಿದ್ದು, ದಾಳಿಯಲ್ಲಿ ಒಟ್ಟು 19 ಸೈನಿಕರನ್ನು ಕೊಂದಿರುವುದಾಗಿ ಹೇಳಿದೆ.

ಖುಂಡುಜ್ ಪ್ರಾಂತ್ಯದ ಶೋರಾಕಾಕ್ ನಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ದಾಳಿ ಮಾಡಿದ ಉಗ್ರರ ವಿರುದ್ಧ ಆಫ್ಘನ್ ಸೇನೆ ಸೇನಾ ಕಾರ್ಯಾಚರಣೆ ಆರಂಭಿಸಿದೆ ಎಂದು ಆಫ್ಘನ್ ಪೊಲೀಸ್ ವಕ್ತಾರ ಎನ್ಹಾಮುದ್ದೀನ್ ರಹಮಾನಿ ಅವರು ಹೇಳಿದ್ದಾರೆ. 

ಆಫ್ಘಾನಿಸ್ತಾನದಲ್ಲಿನ ತನ್ನ ಸೇನಾಪಡೆಗಳನ್ನು ಕಡಿತಗೊಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ ಬೆನ್ನಲ್ಲೇ ತಾಲಿಬಾನ್ ಉಗ್ರರ ದಾಳಿಗಳು ಹೆಚ್ಚಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com