ಕೊರೋನಾವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 1775ಕ್ಕೆ ಏರಿಕೆ, 70,500 ಮಂದಿಯಲ್ಲಿ ಸೋಂಕು ಪತ್ತೆ

ಚೀನಾದಲ್ಲಿ ಕೋರೋವೈರಸ್ ನಿಂದಾಗಿ ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದೀಗ ಮತ್ತೆ ಮಹಾಮಾರಿಗೆ ವೈರಸ್'ಗೆ ಬಲಿಯಾದವರ ಸಂಖ್ಯೆ 1,775ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಕೋರೋವೈರಸ್ ನಿಂದಾಗಿ ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇದೀಗ ಮತ್ತೆ ಮಹಾಮಾರಿಗೆ ವೈರಸ್'ಗೆ ಬಲಿಯಾದವರ ಸಂಖ್ಯೆ 1,775ಕ್ಕೆ ಏರಿಕೆಯಾಗಿದೆ. 

ವೈರಸ್'ಗೆ ಹೊಸದಾಗಿ ಮತ್ತೆ 105 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,775ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮತ್ತೆ ಹೊಸದಾಗಿ 2,048 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು,  ಈ ವರೆಗೂ ಸೋಂಕಿ ಪೀಡಿತರ ಸಂಖ್ಯೆ 70,548ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಹುಬೆ ಪ್ರಾಂತ್ರ ವೊಂದರಲ್ಲಿಯೇ 100 ಮಂದಿ ಸಾವನ್ನಪ್ಪಿದ್ದು, ಹೆನಾನ್ ನಲ್ಲಿ 3 ಹಾಗೂ ಗ್ವಾಗ್ಡೋಂಗ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಚೀನಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಇನ್ನು ಸೋಂಕು ತಗುಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 10,844 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 7,264 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. 

ಕೊರೋನಾ ವೈರಸ್ ನಿಂದಾಗಿ ಹುಬೆ ಪ್ರಾಂತ್ಯದ ಒಟ್ಟು 18 ನಗರಗಳಲ್ಲಿರುವ 50 ಮಿಲಿಯನ್ ಜನರು ಜನವರಿ 23ರಿಂದಲೂ ಒಳಗೆ ಇರಲಾಗದೆ, ಹೊರಗೂ ಬರಲು ಸಾಧ್ಯವಾಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಮಾರಕ ವೈರಸ್ ನ್ನು ತಡೆಯಲು ಚೀನಾ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆಯಾದರೂ, ಯಾವುದೇ ಪ್ರಯೋಜನಗಳಾಗುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com