ದುಬೈ: ಮನೆಗೆ ಹೊತ್ತಿಕೊಂಡ ಬೆಂಕಿ; ಪತ್ನಿ ರಕ್ಷಿಸಲು ಹೋಗಿ ಪ್ರಾಣತೆತ್ತ ಭಾರತೀಯ ವ್ಯಕ್ತಿ

ಅಪಾರ್ಟ್ ಮೆಟ್ ನೊಳಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಿಸಲು ಹೋಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ. 

Published: 17th February 2020 01:12 PM  |   Last Updated: 17th February 2020 01:12 PM   |  A+A-


Kerala man succumbs to burn injuries after saving wife from fire in UAE

ದುಬೈ: ಮನೆಗೆ ಹೊತ್ತಿಕೊಂಡ ಬೆಂಕಿ; ಪತ್ನಿ ರಕ್ಷಿಸಲು ಹೋಗಿ ಪ್ರಾಣತೆತ್ತ ಭಾರತೀಯ ವ್ಯಕ್ತಿ

Posted By : Manjula VN
Source : The New Indian Express

ದುಬೈ: ಅಪಾರ್ಟ್ ಮೆಟ್ ನೊಳಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಿಸಲು ಹೋಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ. 

ದುರ್ಘಟನೆಯಲ್ಲಿ ಅನಿಲ್ ನಿನಾನ್ (32) ಎಂಬ ವ್ಯಕ್ತಿಯ ದೇಹ ಶೇ.90ರಷ್ಟು ಸುತ್ತು ಹೋಗಿತ್ತು. ಬಳಿಕ ಅಬುಧಾಬಿಯ ಮುಫ್ರಾಖ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸಾವು-ಬದುಕಿನ ನಡುವೆ ಅನಿಲ್ ಹೋರಾಟ ನಡೆಸುತ್ತಿದ್ದರು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 

ಕೆಲ ದಿನಗಳ ಹಿಂದ,್ಟೇ ಉಮ್ ಅಲ್ ಖ್ವಾವೈನ್ ಅಪಾರ್ಟ್ ಮೆಂಟ್ ನ ಕಾರಿಡಾರ್ ನಲ್ಲಿದ್ದ ಎಲೆಕ್ಟ್ರಿಕ್ ಬಾಕ್ಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಅನಿಲ್ ಅವರ ಪತ್ನಿಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಪತಿ ಆಕೆಯನ್ನು ರಕ್ಷಿಸಲು ಹೋಗಿದ್ದರು. ಈ ವೇಳೆ ಅನಿಲ್ ಅವರಿಗೆ ಬೆಂಕಿ ತಗುಲಿ ದೇಹ ಶೇ.90ರಷ್ಟು ಭಾಗ ಸುಟ್ಟು ಹೋಗಿತ್ತು. ಕೂಡಲೇ ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. 

ಅನಿಲ್ ಅವರ ಪತ್ನಿ ನೀನು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅನಿಲ್ ಅವರ ಸಾವು ಅತ್ಯಂತ ಆಘಾತವನ್ನು ತಂಡಿದೆ ಎಂದು ಅನಿಲ್ ಅವರ ಆಪ್ತರು ಮಾಹಿತಿ ನೀಡಿದ್ದಾರೆ. 

ಘಟನೆಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ. ಆದರೆ, ನೀನು ಅವರಿಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಅನಿಲ್ ಕೊಠಡಿಯಲ್ಲಿದ್ದರು. ಶಬ್ಧ ಕೇಳಿ ಅನಿಲ್ ಅವರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಪತ್ನಿಯನ್ನು ರಕ್ಷಣೆ ಮಾಡಲು ಹೋಗಿದ್ದಾರೆ. ಈ ವೇಳೆ ಅವರಿಗೂ ಬೆಂಕಿ ತಗುಲಿದೆ. ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ ಎಂದು ಹೇಳಲಾಗುತ್ತಿದೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp