ಕರಾಚಿ ಬಂದರಿನಲ್ಲಿ ನಿಗೂಢ ವಿಷಾನಿಲ ಸೋರಿಕೆ, ಕನಿಷ್ಠ 14 ಸಾವು

ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ನಿಗೂಢ ವಿಷಾನಿಲ ಸೋರಿಕೆ ಪರಿಣಾಮ ಕನಿಷ್ಠ 14 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. 

Published: 18th February 2020 09:16 PM  |   Last Updated: 18th February 2020 09:16 PM   |  A+A-


toxic gas in Karachi's Keamari port

ಕರಾಚಿ ಬಂದರಿನಲ್ಲಿ ವಿಷಾನಿಲ ಸೋರಿಕೆ

Posted By : Srinivasamurthy VN
Source : Online Desk

ಕರಾಚಿ: ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ನಿಗೂಢ ವಿಷಾನಿಲ ಸೋರಿಕೆ ಪರಿಣಾಮ ಕನಿಷ್ಠ 14 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. 

ಕರಾಚಿಯ ಕೇಮಾರಿ ಬಂದರು ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ14 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 25ಕ್ಕೂ ಅಧಿಕ ಮಂದಿಯಲ್ಲಿ ಗಂಭೀರ ಉಸಿರಾಟದ ಸಮಸ್ಯೆ ಅರಂಭವಾಗಿದ್ದು, ಎಲ್ಲರನ್ನೂ ಸಮೀಪದ ಜಿಯಾವುದ್ದೀನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತಂತೆ ಆಸ್ಪತ್ರೆ ವಕ್ತಾರ ಆಮೀರ್​ ಶೆಹಜಾದ್ ಹೇಳಿಕೆ ಬಿಡುಗಡೆ ಮಾಡಿದ್ದು, ಕಳೆದ ಎರಡು ದಿನಗಳ ಅವಧಿಯಲ್ಲಿ ಆಸ್ಪತ್ರೆ ದಾಖಲಾದವರ ಪೈಕಿ 9 ಜನ ಸಾವನ್ನಪ್ಪಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೌಟಿನ್ಯ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇಬ್ಬರು ಮೃತಪಟ್ಟಿದ್ದು, ಮಂಗಳವಾರ ಇನ್ನೂ ಮೂವರು ಮೃತ ಪಟ್ಟಿದ್ದು ಮೃತರ ಸಂಖ್ಯೆ 14ಕ್ಕೇರಿದೆ.

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮೋನ್ ಅವರು, ಈ ವಿಷಾನಿಲ ಹರಡುವುದಕ್ಕೆ ಕಾರಣವಾಗಿದ್ದೇನು ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ಮುಂದುವರಿದಿದ್ದು, ಜನರು ಅಸ್ವಸ್ಥರಾಗುವುದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp