ಕಾಶ್ಮೀರ ವಿಷಯ; ಭಾರತ-ಪಾಕಿಸ್ತಾನ ನಡುವೆ ಮಧ್ಯಸ್ಥಿಕೆವಹಿಸಲು ಅಂಟಾನಿಯೋ ಗುಟೆರಸ್ ಸಿದ್ಧ

ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್, ಅಲ್ಲಿನ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಕಾಶ್ಮೀರ ವಿಷಯ ಕುರಿತು ಭಾರತದೊಂದಿಗೆ ಮಧ್ಯಸ್ಥಿ ವಹಿಸಲು ಸಿದ್ಧ ಎಂಬ ಸೂಚನೆಯನ್ನು ನೀಡಿದ್ದಾರೆ.

Published: 18th February 2020 10:55 PM  |   Last Updated: 18th February 2020 10:55 PM   |  A+A-


Antonio Guterres

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಇಸ್ಲಾಮಾಬಾದ್: ನಾಲ್ಕು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್, ಅಲ್ಲಿನ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಕಾಶ್ಮೀರ ವಿಷಯ ಕುರಿತು ಭಾರತದೊಂದಿಗೆ ಮಧ್ಯಸ್ಥಿ ವಹಿಸಲು ಸಿದ್ಧ ಎಂಬ ಸೂಚನೆಯನ್ನು ನೀಡಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಶ್ವಸಂಸ್ಥೆ ಮುಖ್ಯಸ್ಥರು ಸೋಮವಾರ ಸಂಸದರನ್ನು ಭೇಟಿ ಮಾಡಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳ ಪ್ರಕಾರ ಕಾಶ್ಮೀರ ವಿವಾದದ ಪರಿಹರಿಸಬೇಕೆಂಬ ನಿರ್ಣಯವನ್ನು ಬೆಂಬಲಿಸಿದ್ದಕ್ಕಾಗಿ ಸಂಸತ್ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಭಾರತ ಮತ್ತು ಪಾಕಿಸ್ತಾನ ನಡುವೆ ಸಮರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಪುನರಾರಂಭಿಸಲು ಸಾಧ್ಯವಿಲ್ಲ ಇಂತಹ ಉದ್ವಿಗ್ನ ವಾತಾವರಣದಲ್ಲಿ ವಿಶ್ವ ಸಂಸ್ಥೆಯ ನಿರ್ವಹಿಸಬೇಕಾದ ಪಾತ್ರ, ನಾಯಕತ್ವ ಮತ್ತಷ್ಟು ಮಹತ್ವದ್ದಾಗಿದೆ ಎಂದು ಪಾಕಿಸ್ತಾನ ಸಂಸದರು ಒತ್ತಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಕ್ಕೆ ಕಲ್ಪಿಸಲಾಗಿದ್ದ ಸಂವಿಧಾನದ ವಿಧಿ 370 ರದ್ದುಪಡಿಸಿರುವ ಭಾರತ ಸರ್ಕಾರದ ನಿರ್ಧಾರ ಕುರಿತು ಸಂಸತ್ ಸದಸ್ಯರು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗೆ ಸವಿವರವಾಗಿ ವಿವರಿಸಿದರು. ಈ ಹಿಂದೆ ತಾವು ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೇನೆ. ಆದರೆ ಈ ಬಾರಿಯ ಭೇಟಿಯ ಉದ್ದೇಶ ಪಾಕಿಸ್ತಾನ ಸರ್ಕಾರ ಹಾಗೂ ಜನರಿಗೆ ಬೆಂಬಲ ವ್ಯಕ್ತಪಡಿಸುವುದಾಗಿದೆ ಎಂದು ಹೇಳಿದರು.

ಪಾಕಿಸ್ತಾನ ಶಾಂತಿಯನ್ನು ಬಯಸುವ ದೇಶವಾಗಿದ್ದು, ಕಳೆದ ನಾಲ್ಕು ದಶಕಗಳಿಂದ ಅಫ್ಘಾನಿಸ್ತಾನದ ನಿರಾಶ್ರಿತರಿಗೆ ಆತಿಥ್ಯವಹಿಸಿಕೊಂಡುಬಂದಿದೆ. ತನ್ನ ನೆಲದಲ್ಲಿ ಭಯೋತ್ಪಾದನೆಯ ಹಾವಳಿಯನ್ನು ಯಶಸ್ವಿಯಾಗಿ ನಿರ್ಮೂಲನಗೊಳಿಸಿದೆ ಅವರು ಗುಟೆರಸ್ ಹೇಳಿದ್ದಾರೆ.

ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿರುವ ಕಾಶ್ಮೀರ ವಿಷಯದ ಇತ್ಯರ್ಥಕ್ಕೆ ವಿಶ್ವಸಂಸ್ಥೆ ಸೂಕ್ತ ಪಾತ್ರ ವಹಿಸಬಹುದಾಗಿದೆ. ರಾಜತಾಂತ್ರಿಕ ಹಾಗೂ ಸಂವಾದ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದರು ಕಾಶ್ಮೀರ ಕಣಿವೆ ಜನರ ಮೂಲ ಹಕ್ಕುಗಳನ್ನು ಯಾವುದೇ ಬೆಲೆ ತೆತ್ತಾದರೂ ಖಾತರಿ ಪಡಿಸಬೇಕು ಎಂದು ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp