ಇರಾಕ್ ನ ಐದು ಪ್ರಾಂತ್ಯಗಳಿಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ವಿದೇಶಾಂಗ ಸಚಿವಾಲಯ ಸಲಹೆ

ಸದ್ಯದ ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಇರಾಕ್ ಐದು ಪ್ರಾಂತ್ಯಗಳಿಗೆ ಪ್ರಯಾಣ ಬೆಳೆಸದಂತೆ ಭಾರತೀಯ ವಿದೇಶಾಂಗ ಇಲಾಖೆ ಭಾರತೀಯರಿಗೆ ಸಲಹೆ ನೀಡಿದೆ.
ಇರಾಕ್ ನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)
ಇರಾಕ್ ನಲ್ಲಿ ಪ್ರತಿಭಟನೆ (ಸಂಗ್ರಹ ಚಿತ್ರ)

ನವದೆಹಲಿ: ಸದ್ಯದ ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಇರಾಕ್ ಐದು ಪ್ರಾಂತ್ಯಗಳಿಗೆ ಪ್ರಯಾಣ ಬೆಳೆಸದಂತೆ ಭಾರತೀಯ ವಿದೇಶಾಂಗ ಇಲಾಖೆ ಭಾರತೀಯರಿಗೆ ಸಲಹೆ ನೀಡಿದೆ.

ಇರಾಕ್ ನ ಐದು ಪ್ರಾಂತ್ಯಗಳಾದ ನಿನೆವೆ, ಸಲಾಹುದ್ದೀನ್, ದಿಯಾಲಾ, ಅನ್ಬರ್, ಮತ್ತು ಕಿರ್ಕುಕ್ ಗಳನ್ನು ಹೊರತುಪಡಿಸಿ ಭಾರತೀಯ ಪ್ರಜೆಗಳು ಇರಾಕ್‌ಗೆ ಪ್ರಯಾಣಿಸುವುದನ್ನು ಪರಿಗಣಿಸಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

ಅಲ್ಲಿನ ಸದ್ಯದ ಭದ್ರತಾ ಪರಿಸ್ಥಿತಿಯಿಂದ ಇರಾಕ್ ನ ಈ ಐದು ಪ್ರಾಂತ್ಯಗಳು ಅಸುರಕ್ಷಿತವಾಗಿವೆ ಎಂದು ಸಚಿವಾಲಯ ಎಚ್ಚರಿಕೆ ಸಲಹೆಯಲ್ಲಿ ತಿಳಿಸಿದೆ.

ಇರಾಕ್ ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಆರಂಭವಾಗಿದ್ದು, ನಿನೆವೆ, ಸಲಾಹುದ್ದೀನ್, ದಿಯಾಲಾ, ಅನ್ಬರ್, ಮತ್ತು ಕಿರ್ಕುಕ್ ನಲ್ಲಿ ಪ್ರತ್ಯೇಕತಾವಾದಿಗಳು ಈ ಪ್ರತಿಭಟನೆಯ ಲಾಭ ಪಡೆದು ದಾಳಿ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಭಾರತ ವಿದೇಶಾಂಗ ಇಲಾಖೆ ತನ್ನ ಪ್ರಜೆಗಳಿಗೆ ಇರಾಕ್ ಭೇಟಿ ಕುರಿತು ಸಲಹೆ ನೀಡಿದೆ. ಅಂತೆಯೇ ಇರಾಕ್ ನ ನಜಾಫ್ ಮತ್ತು ಕರ್ಬಾಲಾ ಪ್ರಾಂತ್ಯಗಳಿಗೆ ತೆರಳುವ ಯಾತ್ರಿಕರು ನಿರ್ಭೀತಿಯಿಂದ ಪ್ರಯಾಣಿಸಬಹುದು ಎಂದು ಗ್ರೀನ್ ಸಿಗ್ನಲ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com