ಕೊರೋನಾ ವೈರಸ್: ಸಾವಿನ ಸಂಖ್ಯೆ 2,118ಕ್ಕೆ ಏರಿಕೆ, ವಿಳಂಬಗೊಂಡ ಭಾರತೀಯರ ಸ್ಥಳಾಂತರ

ಮಹಾಮಾರಿ ಕೊರೋನಾ ವೈರಸ್ ಮರಣಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆ 2,118ಕ್ಕೆ ಏರಿಕೆಯಾಗಿದೆ. ಪರಿಣಾಮ ಚೀನಾದಲ್ಲಿ ಆತಂತಕ್ಕೀಡಾಗಿರುವ ಭಾರತೀಯರ ಸ್ಥಳಾಂತರ ಕೂಡ ವಿಳಂಬಗೊಳ್ಳುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಮಹಾಮಾರಿ ಕೊರೋನಾ ವೈರಸ್ ಮರಣಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆ 2,118ಕ್ಕೆ ಏರಿಕೆಯಾಗಿದೆ. ಪರಿಣಾಮ ಚೀನಾದಲ್ಲಿ ಆತಂತಕ್ಕೀಡಾಗಿರುವ ಭಾರತೀಯರ ಸ್ಥಳಾಂತರ ಕೂಡ ವಿಳಂಬಗೊಳ್ಳುವಂತಾಗಿದೆ. 

ವೈರಸ್ ಗೆ ಹೊಸದಾಗಿ 114ಮಂದಿ ಬಲಿಯಾಗಿದ್ದು, ಇದರಿಂದಾಗಿ ಸಾವಿನ ಸಂಖ್ಯೆ 2,118ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿತರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಇದೀಗ 74,576ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ. 

74,576.ಪೈಕಿ 56303 ಜನರು ಇನ್ನೂ ಗುಣಮುಖರಾಗಿಲ್ಲ. 11864 ಜನರ ಸ್ಥಿತಿ ಗಂಭೀರವಾಗಿದೆ. 16155 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಹೇಳಿಕೆ ತಿಳಿಸಿದೆ.

ಈ ನಡುವೆ ಚೀನಾದಲ್ಲಿ ಆತಂತಕ್ಕೀಡಾಗಿರುವ ಭಾರತೀಯ ರಕ್ಷಣೆಗೆ ಭಾರತೀಯ ವಾಯುಪಡೆ ಮುಂದಾಗಿದ್ದು, ಭಾರತೀಯರ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಕಂಡಿದೆ. ಈಗಾಗಲೇ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಿರುವ ವಾಯುಪಡೆ, ಮತ್ತಷ್ಟು ಭಾರತೀಯರ ಸ್ಥಳಾಂತರ ಮಾಡುವ ಸಲುವಾಗಿ ವಿಮಾನವನ್ನು ವುಹಾನ್'ಗೆ ಕಳುಹಿಸಿದ್ದು, ಸೋಂಕು ಹೆಚ್ಚಾಗುತ್ತಿರುವ ಪರಿಣಾಮ ಭಾರತೀಯರ ಸ್ಥಳಾಂತರ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com