'ಗ್ರೇ ಲಿಸ್ಟ್'ನಲ್ಲೇ ಉಳಿದ ಪಾಕಿಸ್ತಾನ, 4 ತಿಂಗಳಲ್ಲಿ ಉಗ್ರವಾದ ಹತ್ತಿಕ್ಕದಿದ್ದರೆ ಕಠಿಣ ಕ್ರಮ: ಎಫ್‌ಎಟಿಎಫ್ ಎಚ್ಚರಿಕೆ!

ಜಾಗತಿಕ ಉಗ್ರ ಚಟುವಟಿಕೆಗೆ ಹಣ ಹೂಡಿಕೆ ಮುಂದುವರಿಸಿರುವ ಪಾಕಿಸ್ತಾನವನ್ನು  "ಗ್ರೇ ಲಿಸ್ಟ್" ನಲ್ಲಿ ಮುಂದುವರಿಸಲು ಜಾಗತಿಕ ಉಗ್ರವಾದ ಹಣಕಾಸು ನಿಗ್ರಹ ಸಂಸ್ಥೆ ಎಫ್‌ಎಟಿಎಫ್ ತೀರ್ಮಾನಿಸಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ನವದೆಹಲಿ: ಜಾಗತಿಕ ಉಗ್ರ ಚಟುವಟಿಕೆಗೆ ಹಣ ಹೂಡಿಕೆ ಮುಂದುವರಿಸಿರುವ ಪಾಕಿಸ್ತಾನವನ್ನು "ಗ್ರೇ ಲಿಸ್ಟ್" ನಲ್ಲಿ ಮುಂದುವರಿಸಲು ಜಾಗತಿಕ ಉಗ್ರವಾದ ಹಣಕಾಸು ನಿಗ್ರಹ ಸಂಸ್ಥೆ ಎಫ್‌ಎಟಿಎಫ್ ತೀರ್ಮಾನಿಸಿದೆ. ಭವಿಷ್ಯದಲ್ಲಿ ಎಲ್‌ಇಟಿ ಮತ್ತು ಜೆಎಂನಂತಹ ಭಯೋತ್ಪಾದಕ ಗುಂಪುಗಳಿಗೆ ಹಣದ ಹರಿವನ್ನು ತಡೆಯುವಲ್ಲಿ ವಿಫಲವಾದರೆ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದೆ.

ಪ್ಯಾರಿಸ್‌ನಲ್ಲಿನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ ಪ್ಲೀನರಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. "ಗ್ರೇ ಲಿಸ್ಟ್" ನಲ್ಲಿ ಪಾಕಿಸ್ತಾನವನ್ನು ಮುಂದುವರಿಸಲು ಎಫ್ಎಟಿಎಫ್ ನಿರ್ಧರಿಸಿದೆ. ಜೂನ್ ವೇಳೆಗೆ ಪೂರ್ಣ ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ,ಪಾಕ್ ಮುಂದಿನ ಕ್ರಮಕ್ಕೆ ಸಿದ್ದವಾಗಿರಬೇಕಾಗುತ್ತದೆ. ಎಂದು ಎಫ್‌ಎಟಿಎಫ್ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದೆ ಎಂದು ಮೂಲಗಳು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com